Header Ads Widget

ಉದ್ಯಾವರ ಟ್ರಿನಿಟಿ ಐಟಿಐ ನಲ್ಲಿ ಉಚಿತ ಕಂಪ್ಯೂಟರ್ ತರಬೇತಿ

ಉದ್ಯಾವರ : ಇಲ್ಲಿಯ ಟ್ರಿನಿಟಿ ಕೈಗಾರಿಕಾ ಸಂಸ್ಥೆಯ ಜ್ಞಾನ ಸಾಧನ ಟ್ರಸ್ಟ್ (ರಿ) ಉದ್ಯಾವರ ಇದರ ವತಿಯಿಂದ 30 ಅಭ್ಯರ್ಥಿಗಳಿಗೆ (ಮಹಿಳೆಯರಿಗೆ ಮೊದಲ ಆದ್ಯತೆ) ಸೀಮಿತವಾಗಿ 10 ತಿಂಗಳ ಉಚಿತ ಕಂಪ್ಯೂಟರ್ ಹಾಗೂ ಆಫೀಸ್ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪೂರ್ಣ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 ಉದ್ಯಾವರ ಟ್ರಿನಿಟಿ ಐಟಿಐ ಮತ್ತು ಉಡುಪಿಯ ಸ್ಪಾರ್ಕ್ ಸಾಫ್ಟ್ ವೇರ್ ಟ್ರೈನಿಂಗ್ ಸೆಂಟರ್ ನಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದ್ದು, ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಪಾಸ್ ಆಗಿರಬೇಕು. ಬೆಳಗ್ಗೆ, ಮಧ್ಯಾಹ್ನ, ಸಂಜೆ ಅಥವಾ ರಜಾದಿನಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, 15 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾತ್ರವಲ್ಲದೇ ಎಸ್ಸಿ/ಎಸ್ಟಿ ಹಾಗೂ ಅರ್ಹರಿಗೆ ಸ್ಕಾಲರ್ಶಿಪ್ ಸೌಲಭ್ಯಗಳು ಕೂಡ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 14, ಅರ್ಜಿಗಳು ಟ್ರಿನಿಟಿ ಐಟಿಐ ನಲ್ಲಿ ಲಭ್ಯವಿದೆ. ವಿವರಗಳಿಗಾಗಿ 9481736746 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು