ದಿನಾಂಕ:10/08/2025 ರಂದು ಹೆಬ್ರಿ ತಾಲೂಕು ವರಂಗ ಗ್ರಾಮದ ಮುನಿಯಾಲು ಬೈಲು ಎಂಬಲ್ಲಿ ಸರಕಾರಿ ಹಾಡಿಯಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಹೆಬ್ರಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನೆಲದಲ್ಲಿ ಸುಮಾರು 6 ಜನರು ಸುತ್ತಲೂ ಕುಳಿತು ನೆಲದ ಮೇಲೆ ರಟ್ಟು ಹಾಸಿ ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಟೀಟ್ ಎಂಬ ಆಟವನ್ನು ಆಡುತ್ತಿದ್ದನ್ನು ಖಚಿತಪಡಿಸಿಕೊಂಡು ಮದ್ಯಾಹ್ನ 13.00 ಗಂಟೆಗೆ ದಾಳಿ ಮಾಡಿ ಆಟದಲ್ಲಿ ನಿರತರಾಗಿರುವ 1.ಉದಯ ನಾಯ್ಕ 2.ಶಿವರಾಮ ಶೆಟ್ಟಿ 3.ಕಿರಣ ನಾಯ್ಕ 4.ಆನಂದ 5.ಅಶೋಕ 6.ಸುರೇಶ ನಾಯ್ಕ ರನ್ನು ವಶಕ್ಕೆ ಪಡೆದು ಅವರು ಆಟಕ್ಕೆ ಉಪಯೋಗಿಸಿದ ನಗದು ರೂ.3,390/-, ಇಸ್ಪೀಟ್ ಎಲೆಗಳು-104 ಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ಧ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 50/2025 ಕಲಂ: 87 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 ಕಾಮೆಂಟ್‌ಗಳು