ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48 ದಿನಗಳ ಕಾಲ ನಡೆಯುತ್ತಿರುವ ಮಂಡಲೋತ್ಸವ ಕಾರ್ಯಕ್ರಮ ದಲ್ಲಿ ಗುರುವಾರ ಸಂಜೆ ರಾಜಾಂಗಣದ ಶ್ರೀ ಮಧುತೀರ್ಥ ವೇದಿಕೆಯಲ್ಲಿ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉಡುಪಿ ಜಿಲ್ಲಾಧಿಕಾರಿ ಯಾಗಿದ್ದ ವಿಶ್ರಾಂತ ಐಎಎಸ್ಅ ಧಿಕಾರಿ ಡಾ.ಮುದ್ದುಮೋಹನ್ ಅವರಿಂದ ಭಕ್ತಿ ಸಂಗೀತ ದಾಸವಾಣಿ ಗಾಯನ ಸುಶ್ರಾವ್ಯವಾಗಿ ಮೂಡಿ ಬಂತು.
ತನು ನಿನ್ನದು, ಹರಿಕಥಾ ಶ್ರವಣ, ಮಾಧವ ಮಧುಸೂದನ, ಶುಕ್ಲಾಂಬರಧರಂ, ವಾತಾಪಿ ಗಣಪತಿಂ ಭಜೇ ಹೀಗೆ ಅನೇಕ ಗಾಯನಗಳನ್ನು ಹಾಡಲಾಯಿತು.
ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಹಿಂದೂಸ್ಥಾನಿ ಗಾಯನದಿಂದ ಮುದ್ದು ಮೋಹನ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದರು.
ಇವರೊಂದಿಗೆ ಪಕ್ಕವಾದ್ಯದಲ್ಲಿ ಪಂ.ರಾಜ ಗೋಪಾಲ್ ಕಲ್ಲೂರ್ಕರ್ ತಬಲಾ, ಹಾರ್ಮೋನಿ ಯಂನಲ್ಲಿ ಪ್ರಸಾದ್ ಕಾಮತ್ ಹಾಗೂ ವಯ ಲಿನ್'ನಲ್ಲಿ ಪಂ.ಟಿ. ರಂಗ ಪೈ ಸಾಥ್ ನೀಡಿ ದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಡಾ.ಮುದ್ದುಮೋಹನ್ ದಂಪತಿ ಗಳನ್ನು ಅಭಿನಂದಿಸಿ, ಗೌರವಿಸಿದರು.
0 ಕಾಮೆಂಟ್‌ಗಳು