Header Ads Widget

ಶ್ರೀಕೃಷ್ಣ ಬಾಲನಿಕೇತನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ), ಉಡುಪಿ ಹಿಂದೂ ರಾಷ್ಟ್ರದ ಸಂಭ್ರಮದ ಹಬ್ಬ ರಕ್ಷಾ ಬಂಧನದ ಪ್ರಯುಕ್ತ ಮುಚ್ಚಿಲು ಕೋಡಿನ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅಲ್ಲಿಯ ಮಕ್ಕಳಿಗಾಗಿ ಹಲವಾರು ಕ್ರೀಡಾ ಸ್ಪರ್ಧೆಗಳನ್ನು ಮಾಡಿ ಸ್ಪರ್ಧಾ ವಿಜೇತರಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ನಂತರ ಅಲ್ಲಿಯ ಮಕ್ಕಳಿಂದ ಹಾಗೂ ಪರಿಷತ್ತಿನ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕರ್ನಾಟಕ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಶ್ರೀ ವಾದಿರಾಜ ಭಟ್ ರವರು ಮಕ್ಕಳಿಗೆ ಬಹುಮಾನ ವಿತರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಲನಿಕೇತನದ ಟ್ರಸ್ಟಿಗಳಾದ ಶ್ರೀ ರಾಮಚಂದ್ರ ಉಪಾಧ್ಯ ಹಾಗೂ ಗುರುರಾಜ ಭಟ್ ಪರಿಷತ್ತು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಪಾಂಗಣ್ಣಾಯ ಪೂತನಿಯ ಏಕವ್ಯಕ್ತಿ ಕಥಾ ಪ್ರಹಸನವನ್ನು ಪ್ರದರ್ಶಿಸಿ ಮಕ್ಕಳ ಮನಸ್ಸನ್ನು ಸೂರೆ ಗೈದರು. ಶ್ರೀಮತಿ ಜ್ಯೋತಿ ಲಕ್ಷ್ಮಿಯವರು ರಕ್ಷಾ ಬಂಧನದ ಬಗ್ಗೆ ಮಾತನಾಡುತ್ತಾ ತಾಯಿ ತಂದೆ, ಗುರುಗಳ ಬಗ್ಗೆ ಮಕ್ಕಳಿಗೆ ಇರಬೇಕಾದ ಗೌರವ ಹಾಗೂ ಗುಣಗಳ ಬಗ್ಗೆ ತಿಳಿ ಹೇಳಿದರು. ವೇದಿಕೆಯಲ್ಲಿದ್ದ ಗಣ್ಯರು ಎಲ್ಲಾ ಮಕ್ಕಳಿಗೆ ರಕ್ಷಾ ಬಂಧನವನ್ನು ಕಟ್ಟುವುದರ ಮೂಲಕ ಸಹೋದರ ಪ್ರೀತಿಯನ್ನು ನೀಡಿದರು. ಪರಿಷತ್ತಿನಿಂದ ಬಾಲನಿಕೇತನಕ್ಕೆಅಗತ್ಯವಿರುವ ವಸ್ತುಗಳನ್ನು ಅಧ್ಯಕ್ಷರೊಂದಿಗೆ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪರು ಹಸ್ತಾಂತರಿಸಿದರು. ಬಂದ ಎಲ್ಲಾ ಅತಿಥಿ ಅಭ್ಯಾಗತರನ್ನು ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ ಎನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದನೆಯನ್ನು ಸಲ್ಲಿಸಿದರು. ಸಂಯೋಜಕಿ ಅಮಿತಾ ಕ್ರಮಾಧಾರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಪರ್ಧೆ ಹಾಗೂ ಮನೋರಂಜನೆಯ ಕಾರ್ಯಕ್ರಮಕ್ಕೆ ಅಮಿತಾ ರವರೊಂದಿಗೆ ಲಕ್ಷ್ಮಿ ನಾರಾಯಣ ಹಾಗೂ ನಾಗರಾಜ್ ಮತ್ತಿತರರು ಸಹಕರಿಸಿದರು. ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಮತ್ತು ಅತಿಥಿಗಳಿಗೆ ಸದಸ್ಯರಿಗೆ ಪರಿಷತ್ತಿನ ವತಿಯಿಂದ ರಾತ್ರಿಯ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು