ಮಹಿಳಾ ಮಂಡಳಿ (ರಿ) ಮಾರ್ಪಳ್ಳಿ ಇದರ 7ನೇ ವರುಷದ ಆಟಿಡೊಂಜಿ ದಿನ ಕಾರ್ಯಕ್ರಮ ಗೆಳೆಯರ ಬಳಗ (ರಿ) ಮಾರ್ಪಳ್ಳಿ ಇಲ್ಲಿ ನಡೆಯಿತು. ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ರಮಾನಂದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತುಳುನಾಡ ಧ್ವನಿ ತುಳುಪತ್ರಿಕೆಯ ಯಶೋದಾ ಕೇಶವ್ ಉದ್ಘಾಟಿಸಿದರು. ಅವರು ಆಟಿಡೊಂಜಿ ದಿನದ ಮಹತ್ವ ಆಚರಣೆ ವಿಶೇಷತೆ ಮುಂದಿನ ಪೀಳಿಗೆಯವರು ಇದನ್ನು ಮುಂದುವರಿಸಬೇಕು ತುಳುನಾಡಿನಲ್ಲಿ ತುಳುಭಾಷೆವಿ ಯನ್ನು ಉಳಿಸಬೇಕು ಎನ್ನುವ ಮಾತನ್ನು ನುಡಿದರು.
ಅತಿಥಿಗಳಾಗಿ ಗಣನಾಥ ಹೆಗ್ಡೆ, ರಮಾ ವೈ ಎನ್ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಅನುರಾಧ ಉದಯ್ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಲಚ್ಚೇಂದ್ರ ಬೈಲೂರು ಹಾಗೂ ಅಧ್ಯಕ್ಷರಾದ ಸುಧಾಕರ ಶೇರಿಗಾರ್ ಉಪಸ್ಥಿತರಿದ್ದರು. ಸಾಧಕರಾದ ಬೇಬಿ, ಕಲ್ಯಾಣಿ ಮಡಿವಾಳ ಹಾಗೂ ನಿರೀಕ್ಷಾ ಕೆ ದೇವಾಡಿಗ ಇವರನ್ನು ಗೌರವಿಸಲಾಯಿತು.
ಕವಿತಾ ಮನೋಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಅನುರಾಧ ಉದಯ್ ಸ್ವಾಗತಿಸಿ ಪ್ರಮೀಳಾ ಸುರೇಶ್ ವಂದಾನಾರ್ಪಣೆ ಗೈದರು. ಆಟಿಡೊಂಜಿ ದಿನದ ವಿಶೇಷ ತಿಂಡಿತಿ ನಿಸುಗಳನ್ನು ಉಣ ಬಡಿಸಲಾಯಿತು. ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
0 ಕಾಮೆಂಟ್‌ಗಳು