ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಸಮಿತಿಯ ವತಿಯಿಂದ ದಿನಾಂಕ ೧೨ ಆಗಸ್ಟ್ ೨೦೨೫ ರಿಂದ ೧೮ ಆಗಸ್ಟ್ ೨೦೨೫ರವರೆಗೆ ಆಂಟಿ ರ‍್ಯಾಗಿಂಗ್ ಸಪ್ತಾಹವನ್ನು ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್‌ನ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸುರಕ್ಷಿತ ಮತ್ತು ಸೌಹಾರ್ದಯುತ ಕಾಲೇಜು ವಾತಾವರಣವನ್ನು ಬೆಳೆಸುವುದು ಮತ್ತು ಸಂಸ್ಥೆಯ ರ‍್ಯಾಗಿಂಗ್ ನಿಷೇಧ ಬದ್ಧತೆಯನ್ನು ಪುನರುಚ್ಛರಿಸುವುದು ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭ :
ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಶುಂಪಾಲರಾದ ಡಾ. ಮಮತಾ ಕೆ.ವಿ.ಯವರು ಮಾತನಾಡಿ, ರ‍್ಯಾಗಿಂಗ್ ಯಾವುದೇ ರೂಪದಲ್ಲಿ ಕೂಡ ನಮ್ಮ ಸಂಸ್ಥೆಯಲ್ಲಿ ಅಸ್ವೀಕಾರ. ನಮ್ಮ ಸಂಸ್ಥೆಯ ಮೌಲ್ಯಗಳಿಗೆ ವಿರುದ್ಧ ಎಂದು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಪರಸ್ಪರ ಗೌರವ, ಸೌಹಾರ್ದ ಹಾಗೂ ಏಕತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣವೇ ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಶ್ಯಕ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್.ರವರು ರ‍್ಯಾಗಿಂಗ್ ನಿಷೇಧಕ್ಕೆ ಸಂಬAಧಿಸಿದ ಕಾನೂನು ಪ್ರವಧಾನಿಕೆಗಳು, ಸಂಸ್ಥೆಯ ಮಟ್ಟದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಆಡಳಿತ ಮುಖ್ಯಾಧಿಕಾರಿಯಾದ ಡಾ. ಪ್ರಶಾಂತ್ ಕೆ.ರವರು ಮಾತನಾಡಿ ಆಂಟಿ ರ‍್ಯಾಗಿಂಗ್ ಸಪ್ತಾಹದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭ :
ಆಂಟಿ ರ‍್ಯಾಗಿಂಗ್ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ ೧೮-೦೮-೨೦೨೫ ರಂದು ಜರುಗಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ರ‍್ಯಾಗಿಂಗ್ ವಿದ್ಯಾರ್ಥಿಗಳ ಮೇಲೆ ಬೀರುವ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳ ಕುರಿತು ಅವರು ವಿವರವಾಗಿ ಮಾತನಾಡಿದರು. ರ‍್ಯಾಗಿಂಗ್ ಒಂದು ನಿಯಮ ಉಲ್ಲಂಘನೆ ಮಾತ್ರವಲ್ಲ, ಅದು ವಿದ್ಯಾರ್ಥಿಯ ಗೌರವ, ಆತ್ಮವಿಶ್ವಾಸ ಹಾಗೂ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ ಎಂದು ಹೇಳಿದರು. ಇದರಿಂದಾಗಿ ಅನೇಕರು ಭಯ, ಆತಂಕ ಹಾಗೂ ದೀರ್ಘಕಾಲದ ಮಾನಸಿಕ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಅವರು ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ನ್ನು ಯಾವುದೇ ಹಂತದಲ್ಲೂ ಸಹಿಸಬಾರದು, ಪೋಷಿಸಬಾರದು ಎಂದು ಮನವಿ ಮಾಡಿದರು. ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸಹೋದರ-ಸಹೋದರಿಯರಂತೆ ಕಾಣಬೇಕು. ಸಹಾನುಭೂತಿ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ವಕೀಲರಾದ ಶ್ರೀ ಗುರುರಾಜ ಐತಾಳ್‌ರವರು ರ‍್ಯಾಗಿಂಗ್ ಕುರಿತ ನಿಯಮಗಳು ಮತ್ತು ಕಾನೂನು ಬದ್ಧ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನನೀಯವಾದ ಉಪನ್ಯಾಸ ನೀಡಿದರು. ರ‍್ಯಾಗಿಂಗ್‌ನ್ನು ಭಾರತದಲ್ಲಿ ಅಪರಾಧ ಎಂದು ಪರಿಗಣಿಸಲಾಗಿದ್ದು. ಅಪರಾಧಗಳ ನಿಲ್ಲಿಸುವಿಕೆ, ಕಾಲೇಜಿನಿಂದ ಹೊರಹಾಕುವಿಕೆ, ದಂಡ ಅಥವಾ ಸೆರೆ ಶಿಕ್ಷೆ ಸೇರಿದಂತೆ ಗಂಭೀರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಭಾರತದ ಸುಪ್ರೀಂ ಕೋರ್ಟ್ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (Uಉಅ) ನೀಡಿರುವ ಶೂನ್ಯ ಸಹಿಷ್ಣುತೆ ನೀತಿಯನ್ನು ವಿವರಿಸಿದರು. ರ‍್ಯಾಗಿಂಗ್ ಕೇವಲ ಹೊಸ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ನಾಶ ಮಾಡುವುದಲ್ಲ, ಅದು ಸಂಸ್ಥೆಯ ಗೌರವಕ್ಕೂ ಧಕ್ಕೆ ತರುತ್ತದೆ ಹಾಗೂ ಅಪರಾಧಿಯ ಭವಿಷ್ಯವನ್ನೇ ಹಾಳುಮಾಡುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಅಧ್ಯಯನ, ನಾಯಕತ್ವ ಮತ್ತು ಸೃಜನಶೀಲತೆಯ ಕಡೆಗೆ ಬಳಸಬೇಕು ಎಂದು ಮನವಿ ಮಾಡಿದರು. ರ‍್ಯಾಗಿಂಗ್‌ಗೆ ಯಾವುದೇ ಕಾರಣವಿಲ್ಲ - ಅದು ಅಪರಾಧ” ಎಂಬುದು ಅವರ ಸಂದೇಶವಾಗಿತ್ತು.
ಆಂಟಿ ರ‍್ಯಾಗಿಂಗ್ ಸಪ್ತಾಹದ ಅಂಗವಾಗಿ ಪೋಸ್ಟರ್ ತಯಾರಿಕಾ ಸ್ಪರ್ಧೆ, ರೀಲ್ ತಯಾರಿಕಾ ಸ್ಪರ್ಧೆ, ರ‍್ಯಾಗಿಂಗ್ ವಿರುದ್ಧ ಜಾಗೃತಿ ಮೂಡಿಸುವ ಬೀದಿ ನಾಟಕ, ಫೋಟೋಗ್ರಫಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಅತಿಥಿ ಉಪನ್ಯಾಸ ಹಾಗೂ ಸೆಲ್ಪಿ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ವಾರಪೂರ್ತಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕಾಲೇಜು ಪರಿಸರವನ್ನು ಸುರಕ್ಷಿತ, ಸಹಾನುಭೂತಿ ಪೂರ್ಣ ಹಾಗೂ ರ‍್ಯಾಗಿಂಗ್ ಮುಕ್ತವಾಗಿಡುವುದಾಗಿ ಶಪಥ ಮಾಡಿದರು. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಭಾಗವಹಿಸುವಿಕೆ ಕಂಡು ಬಂತು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ರವಿ ಕೆ.ವಿ.ಯವರು ಸಂಯೋಜಿಸಿದರು.
0 ಕಾಮೆಂಟ್‌ಗಳು