ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಹಾಲಿ ನಿರ್ದೇಶಕರು, ಹಂಪಿ ನಗರದ ಶ್ರೀಮತಿ ಶೋಭಾ ಮತ್ತು ರವಿಕೀರ್ತಿ ರವರ ಸುಪುತ್ರ, ಎಸ್ಆರ್ ಎಫ್ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯದ ಬಂಧುಗಳಿಗೆ ವಿಶೇಷವಾಗಿ ವಿದ್ಯಾಭ್ಯಾಸ, ವೈದ್ಯಕೀಯ ನೆರವು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಎಳೆಮರೆಕಾಯಿಯಂತೆ ಸಹಾಯ ಹಸ್ತ ನೀಡುವ ನಿರ್ಮಲ ಹೃದಯದ ಶ್ರೀಯುತ ಶೀತಲ್ ಕುಮಾರ್ ಬಿ ಆರ್ ರವರಿಗೆ ಇತ್ತೀಚೆಗೆ ಡೆಲ್ಲಿಯಲ್ಲಿ ಮ್ಯಾನೇಜ್ಮೆಂಟ್ ಸ್ಕಿಲ್ ಮತ್ತು ಸೋಶಿಯಲ್ ಸರ್ವಿಸಿಗೆ ಹೆಸರಾಂತ ಬರ್ಲಿನ್ ಟನ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು ಡೆಲ್ಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು, ಮಾಜಿ ಉಪ ಮುಖ್ಯಮಂತ್ರಿ ಮತ್ತು ಮಾಜಿ ಎಜುಕೇಶನ್ ಮಿನಿಸ್ಟರ್ ಪ್ರೊಫೆಸರ್ ಡಾ. ದಿನೇಶ್ ಶರ್ಮಾ, ಹಾಗೂ ಜಮೈಕಾ ಎಂಬೆಸಿಯ ಕಮಿಷನರ್, ರಾಜೀವ್ ಶರ್ಮಾ ಐಎಎಸ್, ಸಿ ಬಿ ತಿವಾರಿ ಡೆಪ್ಯೂಟಿ ಸೆಕ್ರೆಟರಿ ಹೋಂ ಅಫೇರ್ ಇಂಡಿಯಾ ಮತ್ತು ಇನ್ನು ಹಲವಾರು ಅಂತರಾಷ್ಟ್ರೀಯ ಮಟ್ಟದ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನಡೆಯಿತು.
ಬೆಂಗಳೂರಿನ ಜೈನ್ ಸಹಕಾರ್ ಮತ್ತು ಬಿಎಸ್ಎಂ ಜೈನ್ ಅಸೋಸಿಯೇಷನ್ ಸಂಘದ ವತಿಯಿಂದ ಶಾಲು ಹಾರ ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಯಶೋಧರ ಅಧಿಕಾರಿ, ಉಪಾಧ್ಯಕ್ಷರಾದ ಪಣಿರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ದರ್ಶನ್ ಜೈನ್, ವಿದ್ಯಾನಂದ ಜೈನ್, ಖ್ಯಾತ ಸಾಹಿತಿ ಶ್ರೀಮತಿ ವಿಜಯಲಕ್ಷ್ಮಿ ಅಭಯ ಕುಮಾರ್, ಸನ್ಮಾನಿತರ ಧರ್ಮ ಪತ್ನಿ ಶ್ರೀಮತಿ ಸಹನ ಹಾಗೂ ಪುತ್ರ ಸಮರ್ಥ್ ಸಾರ್ಥಕ್ ಹಾಗೂ ಸಮಾಜ ಸೇವಕ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್ ಉಪಸ್ಥಿತರಿದ್ದರು.
ವರದಿ:ಅಲೆಕ್ಸಾಂಡರ್ ಎಮ್ ಎಚ್
0 ಕಾಮೆಂಟ್‌ಗಳು