Header Ads Widget

ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ , 125 ವರ್ಷದ ಭಜನಾ ಸಪ್ತಾಹ ಅಂಗವಾಗಿ 6 ನೇ ದಿನವಾದ ಸೋಮವಾರ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರವನ್ನು ಪ್ರಧಾನ ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್ ನೆರವೇರಿಸಿದರು.  

ದೇವಾಲಯ ಹಾಗೂ ಭಜನಾ ಸಾಳಿಯನ್ನು ವಿಶೇಷ ಹೂವಿನಿಂದ ಅಲಂಕಾರ ಈ ಸಂದರ್ಭದಲ್ಲಿ ಮಹಾ ರಂಗಪೂಜೆ ನೆಡೆಯಿತು. ಸಾವಿರಾರು ಭಕ್ತರೂ ಸರತಿ ಸಾಲಿನಲ್ಲಿ ಶ್ರೀದೇವರ ದರ್ಶನ ಪಡೆದು ಧನ್ಯರಾದರು.

ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು