ದಿನಾಂಕ: 03.09.2025 ರಂದು ಹೇರಾಡಿ ಗ್ರಾಮದ ರಶ್ಮಿ ಬಾರ್ & ಲಾಡ್ಜ್ ಕಟ್ಟಡದ 2ನೇ ಮಹಡಿಯ ರೂಮ್ ನಂಬ್ರ 203 ರಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿಯನ್ನು ಪಡೆದ ಫಿರ್ಯಾದಿ ಅಶೋಕ್ ಮಾಳಾಬಗಿ, ಪೊಲೀಸ್ ಉಪನಿರೀಕ್ಷಕರು (ಕಾ ಸು & ಸಂಚಾರ), ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಂಜೆ 5:50 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ರೂಮ್ ನಂಬ್ರ 203 ರಲ್ಲಿ ಅಂದರ್-ಬಾಹರ್ ಜುಗಾರಿ ಆಟವಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು, ಕೋಣೆಯೊಳಗೆ ದಾಳಿ ನಡೆಸಿ ಆರೋಪಿತರಾದ 1. ವಿಶ್ವನಾಥ ಪೂಜಾರಿ ಭಟ್ಕಳ(43), ಭಟ್ಕಳ ರೈಲ್ವೇ ನಿಲ್ದಾಣದ ಬಳಿ, ಮುಟ್ಟಿಹಳ್ಳಿ ಉತ್ತರ ಕನ್ನಡ. 2. ಗಣೇಶ್ ಪೂಜಾರಿ(30), ಕುದ್ರೆಕಟ್ಟೆ ಪಡುಮಂಡು ಶಿರಿಯಾರ, ಬ್ರಹ್ಮಾವರ. 3. ಕೇಶವ(57), ಇಂದಿರಾನಗರ ವಾರಂಬಳ್ಳಿ ಬ್ರಹ್ಮಾವರ. 4. ಪ್ರಭಾಕರ ಶೆಟ್ಟಿ(49), ಉಳ್ಳೂರು ಗ್ರಾಮ ಬಸ್ರೂರು, ಕುಂದಾಪುರ. 5. ಜಯರಾಜ್(40), ಹಳವಳ್ಳಿ ಕೋಟೇಶ್ವರ ಕುಂದಾಪುರ. 6. ರಾಜು ಪೂಜಾರಿ(59), ಪಾರಂಪಳ್ಳಿ ಸಾಲಿಗ್ರಾಮ ಬ್ರಹ್ಮಾವರ. 7. ರಾಜೀವ್ ಶೆಟ್ಟಿ(49), ಹೆಸ್ಕೂತ್ತೂರು ಶಿರಿಯಾರ ಸೈಬ್ರಕಟ್ಟೆ ಬ್ರಹ್ಮಾವರ. 8. ರತ್ನಾಕರ(53), ಸಾಲಿಗ್ರಾಮ ಕಾರ್ಕಡ, ಬ್ರಹ್ಮಾವರ. 9. ಪ್ರಶಾಂತ್(38), ಸಾಲಿಗ್ರಾಮ ಕಾರ್ಕಡ, ಬ್ರಹ್ಮಾವರ. 10. ಹರೀಶ್ ಮೋಗವೀರ(40), ಪಡುಕೆರೆ ಕೊಟತಟ್ಟು ಗ್ರಾಮ ಕೋಟ, ಬ್ರಹ್ಮಾವರ, 11. ಲೋಹಿತ್ ಕುಪ್ಪಸ್ವಾಮಿ ಭೋವಿ(38), ನಿಡಗೋಡು ಸಿದ್ದಾಪುರ ತಾಲೂಕು ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆರೋಪಿಗಳು ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ನಂತರ ಆರೋಪಿಗಳಿಂದ ಅಂದರ್-ಬಾಹರ್ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂ. 21080/-, & ಇಸ್ಪೀಟು ಎಲೆಗಳು-52, ಫೈಬರ್ ರೌಂಡ್ ಟೇಬಲ್-1, ಪ್ಲಾಸ್ಟಿಕ್ ಕುರ್ಚಿಗಳು-7, ಕುಶನ್ ಕುರ್ಚಿಗಳು-4, ಮೊಬೈಲ್ ಪೋನ್ ಗಳು -12, Jackpot ಹೆಸರಿನ ಇಸ್ಪಿಟ್ ಎಲೆಗಳಿರುವ 2 ಪ್ಯಾಕ್, KA20HC7811, KA 20 EE 3629 ಮತ್ತು KA20EZ 3096 ನಂಬ್ರದ ದ್ವಿಚಕ್ರ ವಾಹನಗಳನ್ನು ಹಾಗೂ KA28B 7521 ವಾಹನವನ್ನು ಸ್ವಾಧೀನಕ್ಕೆ ಪಡೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 181/2025 US 79, 80 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 ಕಾಮೆಂಟ್‌ಗಳು