Header Ads Widget

ಅಮಾಸೆಬೈಲು : ಸೈಕಲ್‌ ಗೆ ಓಮ್ನಿ ಡಿಕ್ಕಿ; ಸವಾರ ಗಂಭೀರ!

ಅಮಾಸೆಬೈಲು ಹಾಲಾಡಿ ರಸ್ತೆಯ ಅಮಾಸೆಬೈಲು ಅರಣ್ಯ ಇಲಾಖೆಯ ಕಚೇರಿಯ ಹತ್ತಿರ ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಸೈಕಲ್‌ ಗೆ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಂಭೀರ ಗಾಯಗೊಂಡ ಸೈಕಲ್ ಸವಾರ ಮಹಾಬಲ ಪೂಜಾರಿ(55) ಎಂದು ತಿಳಿದು ಬಂದಿದೆ.

ಓಮ್ಮಿ ಚಾಲಕ ಅಜಾಗರೂಕತೆಯಿಂದ ಕಾರನ್ನು ಚಾಲಾಯಿಸಿಕೊಂಡು ಬಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸೈಕಲ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು