ಕೊಡಂಕೂರು ಫ್ರೆಂಡ್ಸ್ ರಿಜಿಸ್ಟರ್ ಕೊಡಂಕೂರು ಇವರು 29ನೇ ಕೃಷ್ಣ ಜನ್ಮಾಷ್ಠಮಿ ಮತ್ತು ಕೃಷ್ಣ ಲೀಲೋತ್ಸವ ಕಾರ್ಯಕ್ರಮವನ್ನು 15-9-2025 ಸೋಮವಾರದಂದು ನಡೆಸಿದರು.
ಇದರ ಬೆಳಗ್ಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಂಗೀತ ಶಿಕ್ಷಕಿ ಶ್ರೀಮತಿ ಸ್ಮಿತಾ ನಾಗರಾಜ್ ಹಾಗೂ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು ಇಲ್ಲಿನ ಶಿಕ್ಷಕಿ ಶ್ರೀಮತಿ ದಿವ್ಯ ಕುಮಾರಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಯಶವoತ್ ಎಸ್ ಪೂಜಾರಿ, ಕೊಳಲು ವಾದಕ ಸುಂದರ್ ಉಡುಪಿ, ಜಯ ಪಿ ಸನಿಲ್, ಜಯಕರ ಪಾಲನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು