ಉಡುಪಿಯ ಎಸ್ ಎಂ ಎಸ್ ಪಿ ಸಂಸ್ಕೃತ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಎಂ ಮಧುಸೂದನ ಭಾಗವತ್ (82 ವರ್ಷ) ಮಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ಅಸುನೀಗಿದ್ದಾರೆ.
ಸುದೀರ್ಘ ಅವಧಿಗೆ ಶಾಲೆಯ ಅಧ್ಯಾಪಕರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಠಾಧೀಶರುಗಳ ಸಂತಾಪ : ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪುತ್ತಿಗೆ ಶ್ರೀಪಾದರು, ಶ್ರೀ ಪೇಜಾವರ ಶ್ರೀಗಳು, ಪೂರ್ವಾಶ್ರಮದಲ್ಲಿ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀಯುತ ಭಾಗವತರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಸದ್ಗತಿಗೆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯೂ ಸಂತಾಪವ್ಯಕ್ತಪಡಿಸಿದೆ.
0 ಕಾಮೆಂಟ್‌ಗಳು