Header Ads Widget

ಮಲ್ಪೆ : ದೋಣಿ ಮಗುಚಿ ಮೀನುಗಾರ ಸಾವು!

ಮಲ್ಪೆ: ಸಸ್ತಾನ ಕೋಡಿತಲೆ ನಿವಾಸಿ ರಾಮ ಖಾರ್ವಿ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಲೈಟ್ ಹೌಸ್ ಬಳಿ 10/9/2025, ಬುಧವಾರದಂದು ಸಂಭವಿಸಿದು ರಾಮ ಖಾರ್ವಿ ಅವರ ಮೃತ ದೇಹವು ಗುರುವಾರ 11/09/2025 ರಂದು ಮಲ್ಪೆ ಲೈಟ್ ಹೌಸ್ ಬಳಿ ಸಿಕ್ಕಿರುತ್ತೆ ರಾಮ ಖಾರ್ವಿ ಅವರ ಮಾಲಕತ್ವದ ದೋಣಿಯಲ್ಲಿ ಅವರು ಸುಮಾರು 25 ರಿಂದ 30 ವರ್ಷ ದಿಂದ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳುತಿದ್ದರು. 

ಎಂದಿನಂತೆ ಈ ದಿನ ಕೂಡ ಮೀನುಗಾರಿಕೆಗೆ ತೆರೆಳಿದ್ದು ಮದ್ಯಾಹ್ನವಾದರೂ ಮನೆಗೆ ಬಾರದಿದ್ದ ಕಾರಣ ರಾಮ ಖಾರ್ವಿ ಅವರ ಮಗ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ ಅವರೊಂದಿಗೆ ಸಂಪರ್ಕ ವಾಗದ ಕಾರಣ ಮಲ್ಪೆ ಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಸೇರಿ ರಾತ್ರಿ ಹುಡುಕಾಟ ಮಾಡಿದ್ರು ಸಿಗದೇ ಇದ್ದಾಗ ಮಾರನೇ ದಿನ ಮಲ್ಪೆ ಲೈಟ್ ಹೌಸ್ ಬಳಿ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂದು ತಿಳಿಯಿತು ಹಾಗೂ ದೋಣಿ,ಇಂಜಿನ,ಬಲೆ ಇತರರ ಸಲಕರಣಿಗಳು ಸಂಪೂರ್ಣ ಹಾನಿಯಾಗಿದ್ದು ತುಂಬಾ ನಷ್ಟವಾಗಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು