ಮಾರ್ಪಳ್ಳಿ ಮಹಿಳಾ ಮಂಡಳಿ ಇದರ ನೇತ್ರತ್ವದಲ್ಲಿ ಮಾರ್ಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ ಎರಡನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಬಹಳಾ ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್‌ನ ಸ್ನಾತಕೋತರ ಪದವೀಧರ ಶಿಕ್ಷಕಿ ಶ್ರೀಮತಿ ಪಾವನಗಂಗ ಕೆ. ರವರು ಉದ್ಘಾಟಿಸಿರು. ಮಾರ್ಪಳ್ಳಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಲತಾ ರಮಾನಂದ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾಸ್ಪತ್ರೆಯ ಹಿರಿಯ ಫಾರ್ಮಾಸಿ ಅಧಿಕಾರಿ ಪ್ರವೀಣ್ ತಂತ್ರಿ, ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘ ನಿ.ಮಿಷನ್ ಕಂಪೌಂಡ್ ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಭಟ್ ಮಾರ್ಪಳ್ಳಿ, ದಿ ನ್ಯೂ ಇಂಡಿಯ ಇಶುರೆನ್ಸ್ಸೆ ಕಂ.ಲಿ. ನ ನಿವೃತ್ತ ಹಿರಿಯ ಅಧಿಕಾರಿ ವಸಂತ್ ಶೇರಿಗಾರ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಶೇಖರ ಸುವರ್ಣ ಗರಡಿಮನೆ ,ಮಾರ್ಪಳ್ಳಿ ಮಹಾಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀನಾಥ್ ಪೂಜಾರಿ, ಮಹಿಳಾ ಮಂಡಳಿ ಗೌರವಾಧ್ಯಕ್ಷರಾದ ಅನುರಾಧ ಉದಯ್, ಗೆಳೆಯರ ಬಳಗ ಮಾರ್ಪಳ್ಳಿಯ ಗೌರವಾಧ್ಯಕ್ಷರಾದ ಲಚೇಂದ್ರ ಬೈಲೂರು, ಗೆಳೆಯರ ಬಳಗ (ರಿ.) ಮಾರ್ಪಳ್ಳಿ, ಇದರ ಅಧ್ಯಕ್ಷರಾದ ಶ್ರೀ ಸುಧಾಕರ ಶೇರಿಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಂದನಾ ಆರ್.ಪಿಯವರು ನಿರೂಪಿಸಿ ವಂದಿಸಿದರು. ಮುಖ್ಯತೀರ್ಪುಗಾರರಾಗಿ ಪ್ರಣವಿ. ಹೆಚ್. ಸುವರ್ಣ ಮತ್ತು ಶ್ರೇಯಾ ಆಚಾರ್ಯ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭಧ ಅಧ್ಯಕ್ಷತೆಯನ್ನು ವೈಕುಂಟ ಬಾಳಿಗ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರೀತಿ ಹರೀಶ್ ರಾಜ್ ಹಾಗೂ ಮುಖ್ಯ ಅತಿಥಿಗಳಾಗಿ ತ್ರಿಶಾ ಗ್ರೂಪ್ ಆಫ್ ಇನ್ನಿಟ್ಯೂಶನ್‌ನ ಸ್ಥಾಪಕರು ಆಗಿರುವ ಗೋಪಾಲ ಕೃಷ್ಣ ಎನ್ ಎಸ್, ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಭಟ್ ಮಾರ್ಪಳ್ಳಿ ,ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಮಾರ್ಪಳ್ಳಿ,ಇದರ ಅಧ್ಯಕ್ಷರಾದ ಉದಯ ದೇವಾಡಿಗ,
ಉದ್ಯಮಿ ಹೇಮಂತ್ ಶೆಟ್ಟಿ, ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮೀನಾರಾಯಣ ಭಟ್, ವಿಪ್ರ ಸ್ವೀಟ್ಸ್ ಹೋಮ್, ಉಡುಪಿ ಇದರ ಮಾಲೀಕರಾದ ಸುಬ್ರಹ್ಮಣ್ಯ ಉಪಾಧ್ಯ ಉಪಸ್ಥಿತರಿದ್ದರು.
ಪ್ರಮುಖವಾಗಿ 70ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಗೆ ನೋಂದಾವಣಿ ಆಗಿದ್ದು, ಸರಿಸುಮಾರು 100 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ಒದಗಿಸಿ ಗೌರವಿಸಲಾಯಿತು, ಹಾಗೂ ವಿಜೇತ ಮಕ್ಕಳಿಗೆ ವಿಶೇಷ ಬಹುಮಾನದೊಂದಿಗೆ ಗೌರವಿಸಲಾಯಿತು.

0 ಕಾಮೆಂಟ್‌ಗಳು