Header Ads Widget

ನಟ ನಾಗೇಶ್ ಕಾಮತ್ ಅವರಿಗೆ ‘ರಂಗಭೂಮಿ ಕಲಾ ತಿಲಕ’ ಪ್ರಶಸ್ತಿ-ಸಮ್ಮಾನ

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವ ಸಂದರ್ಭ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರ ಮತ್ತು ಕಲಾನಿಧಿ ಉಡುಪಿ ವತಿಯಿಂದ ಕುಂದಾಪುರ ರೂಪಕಲಾ ಮೂರು ಮುತ್ತು ನಾಟಕ ತಂಡದ ನಟ ನಾಗೇಶ್ ಕಾಮತ್ ಕಟಪಾಡಿ ಅವರನ್ನು ‘ರಂಗಭೂಮಿ ಕಲಾ ತಿಲಕ’ ಎನ್ನುವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಿ, ಕಲಾ ಬಾಳ್ವೆಯ ಯಶಸ್ಸಿಗೆ ಶುಭ ಹಾರೈಸಿದರು. ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಶಾಲಾ ಸಂಯೋಜಕಿ ಕುಸುಮಾ ನಾಗರಾಜ್, ಗಾಯಕರಾದ ಉಪ್ಪೂರು ಭಾಗ್ಯಲಕ್ಷ್ಮೀ, ಪ್ರಣಮ್ಯಾ ರಾವ್, ವೇ|ಮೂ| ವಿಖ್ಯಾತ ಭಟ್, ಉದ್ಯಮಿ ಆನಂದ ಬಾಯರಿ, ಸ್ವಾತಿ ಪ್ರತೀಕ್, ಮೃಣಾಲ್ ಕೃಷ್ಣ, ಸ್ವಸ್ತಿಕ್ ಆಚಾರ್ಯ, ಜೂ| ಜಾದೂಗಾರ ಪ್ರಥಮ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು