ಜಗದ್ಗುರು ಶ್ರೀಮನ್ಮಧ್ವಾಚಾರ್ಯಮೂಲಮಹಾಸಂಸ್ಥಾನ, ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ, ಉಡುಪಿ ವತಿಯಿಂದ, ದಿನಾಂಕ 14-9-2025 ಅಷ್ಟಮಿಯಂದು 'ನಡೆದಾಡುವ ಭಗವದ್ಗೀತೆ' ಎಂದೇ ಖ್ಯಾತರಾಗಿರುವ, ಗೀತಾ ಸಂತ ಶ್ರೀಶ್ರೀಸುಗುಣೇಂದ್ರತೀರ್ಥಶ್ರೀಪಾದರು ಶ್ರೀಕೃಷ್ಣನ ಕುರಿತಾಗಿ ಬರೆದಿರುವ ಲೇಖನಗಳನ್ನು ಒಳಗೊಂಡಿರುವ ನೂತನ ಕೃತಿ 'ಶ್ರೀಶ್ರೀಸುಗುಣೇಂದ್ರತೀರ್ಥರು ಕಂಡಂತೆ ಕೃಷ್ಣ' ವನ್ನು ಸಂಜೆಯ ಹೊತ್ತಿನಲ್ಲಿ ರಾಜಾಂಗಣದಲ್ಲಿ ಪರ್ಯಾಯಪೀಠಸ್ಥ ಯತಿದ್ವಯರು ಹಾಗೂ ಗಣ್ಯರು ಲೋಕಾ ರ್ಪಣೆಗೊಳಿಸಲಿರುವರು.
ಕೃತಿಯು ಕೃಷ್ಣ ಮಠದ ಬುಕ್ ಸ್ಟಾಲ್ನಲ್ಲಿ 100 ರೂಪಾಯಿ ಗೆ ಲಭ್ಯವಿರಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
0 ಕಾಮೆಂಟ್‌ಗಳು