ಭಾರತದ ಚರಿತ್ರೆಯಲ್ಲಿ ಸ್ತ್ರೀಯರ ಸಾಧನೆ ಗುರುತರವಾದದ್ದು. ನಮ್ಮ ಸ್ತ್ರೀಯರೊಳಗೆ ಅಲಂಕೃತರಾದ ಸರಸ್ವತಿ, ಲಕ್ಷ್ಮಿ, ಕಾಳಿ ಸಮಾಗಮ ಅವರನ್ನು ಅಪ್ರತಿಮ ಸಾಧಕರನ್ನಾಗಿಸಿದೆ. ರಾಣಿ ಅಬ್ಬಕ್ಕ ಇದಕ್ಕೊಂದು ಸ್ಪಷ್ಟ ನಿದರ್ಶನ.
ಆಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣಾದಾಯಿಯಾದುದು ಇಂಥ ಮಗಳನ್ನು ಪಡೆದ ತಾಯಿ ಭಾರತಿಯೂ ಧನ್ಯಳು ಎಂದು ಸಂವೇದನಾ ಫೌಂಡೇಶನ್ ನ ಸಂಸ್ಥಾಪಕರಾದ ಪ್ರಕಾಶ್ ಮಲ್ಪೆ ಅವರು ಅಭಿಪ್ರಾಯಪಟ್ಟರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಅಬ್ಬಕ್ಕ @500, ಪ್ರೇರಣಾದಾಯಿ 100 ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀ ರಾಘವೇಂದ್ರ ಮುದ್ರಾಡಿ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಕಾಂತ ಭಟ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಪ್ರೇಮನಾಥ್ ಅವರು ವಂದಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿ ಶ್ರೀ ದೇವರಾಜ್ ಪುತ್ರನ್ ಅವರು ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು