ಆಟಿಸಂ ಸೊಸೈಟಿ ಆಫ್ ಉಡುಪಿ, ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು - 'ಸಂವೇದ'ದ ಪೋಷಕರಿಗೆ ೧೪ ನೇ ಮಾಸಿಕ ಸಭೆ ನಡೆಯಿತು. ಉಡುಪಿಯ ಶಾಲಾ ಪೂರ್ವ ತಯಾರಿ ಕೇಂದ್ರದ ಮೇಲ್ವಿಚಾರಕರಾದ ಕು ದೀಕ್ಷಿತ ಅವರು ನಿಧಾನ ಗತಿಯ ಮಕ್ಕಳ ಬೆಳವಣಿಗೆಯಲ್ಲಿ ಫಿಸಿಯೋಥೆರಪಿ ಯ ಪ್ರಾಮುಖ್ಯತೆ ತಿಳಿಸಿದರು. ಯುಕೆ ಯಲ್ಲಿಮಕ್ಕಳ ಬೆಳವಣಿಗೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ ಧರ್ಮ ಶೇಖರ್ ಪಾಟೀಲ್ ಅವರು ಆಟಿಸಂ ಪಾಲನೆ ಯ ಸಂಶೋಧನೆ ಗಳು ಕುರಿತು ಮಾಹಿತಿ ನೀಡಿದರು. ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷ ಡಾ ವಿರೂಪಾಕ್ಷ ದೇವರಮನೆ, ಸಂವೇದ ಗುಂಪಿನ ಅಧ್ಯಕ್ಷ ವಿಠ್ಠಲ ಭಕ್ತ, ಪ್ರೋಗ್ರಾಂ ಮೇನೇಜರ್ ಕೀರ್ತೇಶ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು