ಉಡುಪಿ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಆಶ್ರಯದಲ್ಲಿ ಗ್ರೀನ್ ವ್ಯಾಲಿ ಪ್ಯಾರಡೈಸ್ ಹಿರಿಯ ನಾಗರಿಕರ ಕೇಂದ್ರ ಮಣಿಪಾಲದಲ್ಲಿ ನವರಾತ್ರಿಯ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಪ್ರಮುಖರಾದ ಡಾ. ತಾರಾ ಶಾನುಭಾಗ್ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ಅಧ್ಯಕ್ಷರು ವಿದ್ಯಾ ಶ್ಯಾಮ್ ಸುಂದರ್ ತಂತ್ರಿ ಸಂಗೀತ ಗುರುಗಳಾದ ಅಶ್ವಿನಿ ಗಣೇಶ್ ಪೈ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಶುಭ ಹಾರೈಸಿದರು.
ಸಂಸ್ಥೆ, ಪ್ರಮುಖರಾದ ಡಾ. ವೆಂಕಟೇಶ್ ಶಾನುಭಾಗ್, ಡಾ.ಇಂದಿರಾ ಶಾನುಭಾಗ್, ಕಸಾಪ ಗೌ.ಕಾಯ೯ದಶಿ೯ಗಳಾದ ಜನಾದ೯ನ್ ಕೊಡವೂರು, ರಂಜನಿ ವಸಂತ್, ಪದಾಧಿಕಾರಿಗಳಾದ ಸತೀಶ್ ಕೊಡವೂರು, ರಾಘವೇಂದ್ರ ಪ್ರಭು ಕವಾ೯ಲು, ವಸಂತ್, ಪೂರ್ಣಿಮಾ ಜನಾದ೯ನ್ ಕೊಡವೂರು ನಿರೂಪಿಸಿದರು. ಈ ಸಂದರ್ಭದಲ್ಲಿ ಸುಂದರ್ ಇವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.
0 ಕಾಮೆಂಟ್‌ಗಳು