Header Ads Widget

ಶ್ರೀ ಶಾಂತಿಮತೀ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭ

ಶ್ರೀ ಶಾಂತಿಮತೀ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭ ಹಾಗೂ "ಶ್ರೀ ಶಾಂತಿಮತೀ ಪುರಸ್ಕಾರ 2025" ಪ್ರದಾನ ಸಮಾರಂಭವು 20/9/2025 ರಂದು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು. ಜ್ಯೌತಿಷ ವಿದ್ವಾನ್ ಶ್ರೀನಿವಾಸ ಅಡಿಗರು ಸಾಲಿಗ್ರಾಮ ಇವರಿಗೆ "ಶಾಂತಿಮತೀ ಪುರಸ್ಕಾರ 2025" ಪ್ರದಾನ ಮಾಡಲಾಯಿತು. ಶಾಂತಿಮತೀ ಅಧ್ಯಕ್ಷರಾದ ನಾಗ ಭೂಷಣ ಐತಾಳ್ ಅಧ್ಯಕ್ಷತೆವಹಿಸಿದ್ದರು. ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಮಂಜ ಹಾಗೂ ಶೃಂಗೇರಿಯ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆಯ ಅಧ್ಯಕ್ಷರಾದ ವಿದ್ವಾನ್ ವಿನಾಯಕ ಉಡುಪರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ವಿಜಯ ಮಂಜರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಐದು ಮಂದಿ ಪುರೋಹಿತ ದಂಪತಿಗಳನ್ನು ಗೌರವಿಸಲಾಯಿತು. ಅಧ್ಯಕ್ಷರಾದ ನಾಗ ಭೂಷಣ ಐತಾಳ್ ಧನ್ಯವಾದಗೈದು, ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು