Header Ads Widget

ಶ್ರೀಕೃಷ್ಣನ ಬಾಲ್ಯ ಲೀಲೆಯು ನೆನಪಿಗೆ ಬರುತ್ತದೆ: ಅಜಯ್ ಪುರುಷೋತ್ತಮ ಶೆಟ್ಟಿ

ಕೃಷ್ಣನ ವೇಷ ಧರಿಸಿದಾಗ ಮಕ್ಕಳು ತೋರಿಸುವ ಸೃಜನಶೀಲತೆ, ಕಲಾತ್ಮಕತೆ ಹಾಗೂ ನೈಜ ಭಾವಪ್ರಕಟನೆಗಳು ನಮ್ಮನ್ನು ಶ್ರೀಕೃಷ್ಣನ ಬಾಲ್ಯ ಲೀಲೆಯ ನೆನಪಿಗೆ ತರುತ್ತವೆ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಬಾಲಗೋಪಾಲರ ನಗುಮುಖ, ಅವರ ಸರಳತೆ ಮತ್ತು ಮಧುರ ನಟನೆ ಇಂದಿನ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಮಕ್ಕಳಿಂದ ಜೀವಂತವಾಗಲಿದೆ ಎಂದು ಉಡುಪಿಯ ಉಜ್ವಲ್ ಗ್ರೂಪ್ನ ಆಡಳಿತ ನಿರ್ದೇಶಕರಾದ ಅಜಯ್ ಪುರುಷೋತ್ತಮ ಶೆಟ್ಟಿ ತಿಳಿಸಿದರು. 

ಇವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಮಧುರ ಕೃಷ್ಣ– 2025 ಮುಕ್ತ ಕೃಷ್ಣ ವೇಷಧಾರಣಾ ಸ್ಪರ್ಧೆಯ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಮಂತೂರಿನ ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಿದ್ಯಾರ್ಥಿಗಳ ಕಲಾಭಿವ್ಯಕ್ತಿ, ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ವಿಕಸಿಸುವ ದಾರಿಗೆ ಮಹತ್ತರ ಹೆಜ್ಜೆಯಾಗಿದೆ. ವಿಜಯ ಅಥವಾ ಸೋಲು ಮುಖ್ಯವಲ್ಲ, ಈ ಪಾವನ ದಿನದಂದು ಕೃಷ್ಣನ ವೇಷ ಧರಿಸುವುದೇ ಒಂದು ಆಧ್ಯಾತ್ಮಿಕ ಅನುಭವ ಎಂದರು.

ಮುಖ್ಯ ಅತಿಥಿಗಳಾಗಿ ಮೂಲ್ಕಿಯ ಉದ್ಯಮಿ ಶ್ರೀಕಾಂತ್ ಭಟ್ ಹೆಜಮಾಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸುಮನ, ಶಿಮಂತೂರಿನ ಶ್ರೀ ಶಾರದಾ ಸೊಸೈಟಿಯ ಕಾರ್ಯದರ್ಶಿ ಪುರಂದರ ಡಿ ಶೆಟ್ಟಿಗಾರ್, ನಿರ್ದೇಶಕ ಸುರೇಶ್ ರಾವ್ ನಿರಳಿಕೆ, ಪಟೇಲ್ ವಾಸುದೇವ ರಾವ್, ಪಟೇಲ್ ವಿಶ್ವನಾಥ್ ರಾವ್ ಉಪಸ್ಥಿತರಿದ್ದರು. 

ಮಧುರ ಕೃಷ್ಣ ಮುಕ್ತ ಕೃಷ್ಣ ವೇಷಧಾರಣಾ ಸ್ಪರ್ಧೆಯಲ್ಲಿ 125ಕ್ಕೂ ಅಧಿಕ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ. 

ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ಪ್ರಾಚಾರ್ಯ ಜಿತೇಂದ್ರ ವಿ ರಾವ್ ಹೆಜಮಾಡಿ ವಂದಿಸಿದರು, ಸಹ ಶಿಕ್ಷಕಿ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು