ಉಡುಪಿಯ ಪ್ರತಿಷ್ಠಿತ ಆದರ್ಶ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ ಶುಭಾವಸರದಲ್ಲಿ ಯಕ್ಷಗಾನ ಕಲಾರಂಗದ ತಂಡ ಆಸ್ಪತ್ರೆಗೆ ತೆರಳಿ ಡಾ. ಸುಹಾಸ್ ಜಿ. ಸಿ. ಅವರಿಗೆ ಶಾಲು, ಸ್ಮರಣಿಕೆ, ಪುಷ್ಪಗುಚ್ಛ ನೀಡಿ ಶುಭಕೋರಿ ಅಭಿನಂದಿಸಿತು. ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ಸಂಸ್ಥಾಪಕರೂ, ಸಂಸ್ಥೆಯ ದಾನಿಗಳೂ ಆದ ಡಾ. ಚಂದ್ರಶೇಖರ ಜಿ. ಎಸ್. ಮತ್ತು ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದ ತಂಡದಲ್ಲಿ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಇದ್ದರು.
0 ಕಾಮೆಂಟ್‌ಗಳು