Header Ads Widget

ಅ. 24ರಂದು ಬೆಹರೆನ್​ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆ

    

                                               

ಉಡುಪಿ: ಸೈಂಟ್​ ಸಿಸಿಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅ.24ರಂದು ಬೆಹರೆನ್​ ಕನ್ನಡ ಸಂಘದಲ್ಲಿ ಒಂದು ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್​ ಬುಕ್​ ಆಫ್ ರೆಕಾರ್ಡ್​ ಸಾಧನೆ ಮಾಡಲಿದ್ದಾರೆ ಎಂದು ತಂದೆ ಉದಯ್​ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  

ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 ಯೋಗಾಸನ ಪ್ರದರ್ಶನ ಮೂಲಕ ಗೋಲ್ಡನ್​ ಬುಕ್​ ಆಫ್ ​ ರೆಕಾರ್ಡ್​ನಲ್ಲಿ ಹೆಸರು ದಾಖಲಿಸಿ ದ್ದಾರೆ. ಈಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲು ಅಣಿಯಾಗಿದ್ದು, ವಿದೇಶದಲ್ಲಿ ಮೊದಲ ಸಾಧನೆ ಮಾಡಲಿದ್ದಾರೆ. 



ಯೋಗಾಸನ ಪ್ರದರ್ಶನದಲ್ಲಿ ಭಾರತೀಯ ರಾಯಭಾರಿ ವಿನೋದ್​ ಚಾಕೋಬ್​ ಭಾಗವಹಿಸ ಲಿದ್ದಾರೆ.  ಕರಾವಳಿಯ ಹಲವಾರು ಪ್ರತಿಭೆಗಳನ್ನು ನಮ್ಮಲ್ಲಿಗೆ ಕರೆಸಿ ಅವರೆಲ್ಲರಿಗೂ ಗೌರವ ಸಲ್ಲಿಸಿದ್ದೇವೆ ಎಂದು ಬೆಹರೆನ್ ಕನ್ನಡ ಸಂಘದ  ಅಧ್ಯಕ್ಷ ಅಜಿತ್​ ಬಂಗೇರ   ತಿಳಿಸಿದರು. ಕುರ್ಕಾಲು ಗ್ರಾಪಂ ಸದಸ್ಯ ಪ್ರವಿಣ್​ ಕುಮಾರ್​ ಕುರ್ಕಾಲ್, ತನುಶ್ರೀ ಪಿತ್ರೋಡಿ ಉಪಸ್ಥಿತ ರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು