Header Ads Widget

ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಕಾರ್ಯಕಾರಿಣಿ ಸಭೆ

ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಕಾರ್ಯಕಾರಣಿ ಸಭೆಯು ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಜರುಗಿತು. 

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ನಿರ್ದೇಶನದಂತೆ ಮಹಿಳಾ ಕಾಂಗ್ರೆಸ್ ಸದಸ್ಯರ ನೋಂದಣಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಹಿಳಾ ಸದಸ್ಯರನ್ನು ನೋಂದಣಿ ಮಾಡಿದ ಶ್ರೀಮತಿ ಜೇಬಾ ಸೆಲ್ವನ್ ರನ್ನು ಸನ್ಮಾನಿಸಲಾಯಿತು.

ಜೇಬಾರವರ ಬಗ್ಗೆ ಶ್ರೀಮತಿ ಗೀತಾ ವಾಗ್ಲೆ ಪರಿಚಯಿಸಿದರು.

ಉಡುಪಿ, ಬ್ರಹ್ಮಾವರ, ಕೋಟ, ಕುಂದಾಪುರ ಬ್ಲಾಕ್ ಗಳಲ್ಲಿ ಮಹಿಳಾ ಕಾಂಗ್ರೆಸ್ ನ ಕಾರ್ಯಕ್ರಮ ಆಯೋಜನೆ ಮಾಡಿದ್ದರ ಬಗ್ಗೆ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಬ್ಲಾಕ್ ಗಳ ಲ್ಲೂ ಮಹಿಳಾ ಸಂಘಟನೆಯ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಸರಸು ಬಂಗೇರ, ರೇಖಾ ಸುವರ್ಣ, ಅನಿತಾ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್ ರಾಜ್, ಪುಷ್ಪ ಅಂಚನ್, ಚಂದ್ರಿಕಾ ಶೆಟ್ಟಿ, ಗೋಪಿ ನಾಯ್ಕ, ಮಮತಾ ಶೆಟ್ಟಿ,ಸುಮಾ ಅಡ್ಯಂತಾಯ,ಪ್ರಭಾ ಶೆಟ್ಟಿ, ಸರಸ್ವತಿ,ಹೆಲೆನ್, ರಂಜಿನಿ ಹೆಬ್ಬಾರ್, ಶೋಭಾ ಕಕ್ಕುಂಜೆ, ರಮಾದೇವಿ ಮುಂತಾದವರು ಉಪಸ್ಥಿತರಿದ್ದರು. ಜೆಸಿಂತಾರವರು ಸ್ವಾಗತಿಸಿದರು ಸುಮಿತ್ರಾ ರವರು ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು