Header Ads Widget

​ ಹುಟ್ಟೂರಿನಲ್ಲಿ ಜಯನ್ ಮಲ್ಪೆಗೆ ಅದ್ದೂರಿ ಸನ್ಮಾನ

ಮಲ್ಪೆ: ದಲಿತರಲ್ಲಿ ಸಂಘಟನೆಯನ್ನು, ಪ್ರಜ್ಞಾವಂತಿಕೆಯನ್ನು ಬೆಳೆಸಿ, ಅಂಜುವ ಜನರಲ್ಲಿ ಗರ್ಜಿ ಸುವ ಧೈರ್ಯ ತುಂಬಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಗೆ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು.


ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡ ಹಾಗೂ ಸರಸ್ವತಿ ಜಾನಪದ ಕಲಾ  ತಂಡದವರು ಕರ್ನಾಟಕ ಸರಕಾರ ಇತ್ತಿಚ್ಚೆಗೆ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ನೀಡಿ ಗೌರ ವಿಸಿದ ಹಿನ್ನಲೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ ಮುಖ್ಯೋಪಾಧ್ಯಾಯ ವಾಸುದೇವ ಮಾಸ್ತರ್ ಮಾತನಾಡಿ ನಿಸ್ವಾರ್ಥವಾಗಿ ಯಾರು ತಮ್ಮನ್ನು ದಲಿತ ಚಳುವಳಿಗೆ ಸಮರ್ಪಿಸಿಕೊಳ್ಳುತ್ತಾರೋ ಅಂತಹವರನ್ನು ಪ್ರಶಸ್ತಿ ಕೀರ್ತಿ ಹುಡುಕಿಕೊಂಡು ಬರುತ್ತದೆ.​ ಆದರೆ ದಲಿತ ಸಂಘಟನೆಯ ಹೆಸರಿನಲ್ಲಿ ಯಾರು ಸಂಪತ್ತು ಮತ್ತು ಪ್ರಚಾರದ ಬೆನ್ನು ಹತ್ತುತ್ತಾರೋ ಅವರು ದಲಿತ ಸಮಾಜ ದಲ್ಲಿ ಪತನಗೊಳ್ಳುತ್ತಾರೆ ಎಂದರು.


ಅAಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಹಲವು ದಶಕಗಳಿಂದ ಜಯನ್ ಮಲ್ಪೆ ತಮ್ಮ ರಕ್ತ ಸುರಿಸಿ ಕಟ್ಟಿದ ದಲಿತ ಚಳುವಳಿ ಕೆಲವರ ಸ್ವಾರ್ಥಕ್ಕಾಗಿ ಬಲಿಯಾದರೂ ಎಂದೂ ಹತಾಶೆಗೊಳ್ಳದೆ ಈ ನೆಲದಲ್ಲಿ ಸಂಘಟನೆಯನ್ನು ಕಟ್ಟಿ ಯುವ ಜನಾಂಗದಲ್ಲಿ ಸ್ವಾಭಿಮಾನ, ಸ್ವಾವಲಂಬನೆಯನ್ನು ತುಂಬಿಸಿ ಹೋರಾಟದ ಬದುಕು ತಂದಿ ದ್ದಾರೆ ಎಂದರು.


ಗ್ರAಥಪಾಲಕಿ ಯಶೋದ ರಮೇಶ್ ಪಾಲ್ ಮಾತನಾಡಿ ಯಾವುದೇ ಅರ್ಜಿ ನೀಡದೆ ಸರಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಜಯನ್ ಮಲ್ಪೆಗೆ ಪ್ರಪ್ರಥಮ ವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇಜಶ್ವಿನಿ ರಾಜೇಶ್‌ವಹಿಸಿದ್ದರು. ವೇದಿಕೆಯಲ್ಲಿ ಸರಸ್ವತಿ ಜಾನಪದ ಕಲಾತಂಡದ ಅಧ್ಯಕ್ಷ ಸದಾನಂದ ಬಲರಾಮನಗರ, ಹರೀಶ್ ಸಲ್ಯಾನ್, ರಾಜೇಶ್, ದಯಾಕರ್ ಮಲ್ಪೆ,ಪ್ರಸಾದ್, ಪ್ರಮೀಳ ಎಚ್​ವನಿತಾ,​ ದೀಪಿಕ,​ ಪೂರ್ಣಿಮ,​ ಸುಜಾತ,​ ವಿನೋದ, ಅಶ್ವಿನಿ,​ ಲೀಲಾವತಿ, ಮುಂತಾದವರು ಉಪಸ್ಥಿತರಿದ್ದರು.


ಗೀತಾ ಬಲರಾಮನಗರ ಸ್ವಾಗತಿಸಿ, ಕುಮಾರಿ ಧರಿತ್ರಿ ವಂದಿಸಿದರು. ಶ್ರೀಮತಿ ದೀಪಿಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.


 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು