ಶಿಕ್ಷಣ ಕಾಶಿ ಮಾಹೆ ವಿವಿಯ ಕುಲಾಧಿಪತಿ ಪದ್ಮವಿಭೂಷಣ ಪುರಸ್ಕೃತ ಡಾ। ರಾಮದಾಸ್ ಎಂ ಪೈ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಸೇವಾ ಕಾರ್ಯಕ್ರಮದ ಅಂಗವಾಗಿ ಮೇಳಗಳಲ್ಲಿ ತಿರುಗಾಟ ನಡೆಸುತ್ತಿರುವ ಅಂದಾಜು 1000ಕ್ಕಿಂತ ಹೆಚ್ಚಿನ ಯಕ್ಷಗಾನ ಕಲಾವಿದರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆಗೆ ಸಾಂಕೇತಿಕವಾಗಿ ಮಣಿಪಾಲ ವಿವಿಯಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ ಡಾ। ಹೆಚ್ ಎಸ್ ಬಲ್ಲಾಳ್, ಉಪಕುಲಾಧಿಪತಿ ಲೆ।ಜ।ಡಾ। ಎಂ ಡಿ ವೆಂಕಟೇಶ್, ಸಹ ಉಪಕುಲಾಧಿಪತಿಗಳಾದ ಡಾ। ನಾರಾಯಣ ಸಭಾಹಿತ್, ಡಾ। ಶರತ್ ರಾವ್, ಕುಲಸಚಿವ ಡಾ। ಗಿರಿಧರ್ ಪಿ ಕಿಣಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ। ಅವಿನಾಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ। ಸುಧಾಕರ ಕಾಂತಿಪುಡಿ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ, ಪಂಚ ಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಉಡುಪಿ ಘಟಕದ ಪದಾಧಿಕಾರಿಗಳು, ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ವಿಶೇಷ ಮನವಿಯ ಮೇರೆಗೆ ಯಕ್ಷಗಾನ ಕಲಾವಿದರಿಗೆ ಮಾಹೆ ವಿವಿಯು ವಿಶೇಷ ಮುತುವರ್ಜಿ ವಹಿಸಿ ಡಾ। ರಾಮದಾಸ್ ಎಂ ಪೈ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ಯಕ್ಷಗಾನ ಕಲಾವಿದರು ಮತ್ತು ಅವರ ಕುಟುಂಬದವರ ಪಾಲಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
0 ಕಾಮೆಂಟ್‌ಗಳು