ವಿವೇಕ ವಿದ್ಯಾಸಂಸ್ಥೆಗಳ ಮಹಾತ್ಮಾ ಗಾಂಧಿ ಸ್ಮಾರಕ ಭವನದಲ್ಲಿ ನಡೆದ ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಇತ್ತೀಚೆಗೆ ನಿವೃತ್ತರಾದ ಸಂಸ್ಕೃತ ಉಪನ್ಯಾಸಕ ಸಿ.ಮಂಜುನಾಥ ಉಪಾಧ್ಯ,ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಜಗದೀಶ ಹೊಳ್ಳ ಮತ್ತು ಸಮಾಜ ಶಾಸ್ತ್ರ ಉಪನ್ಯಾಸಕ ಅಶೋಕ್ ಕುಮಾರ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವೇಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡುತ್ತಿರುವ ಸಂಸ್ಥೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಾಧಕರನ್ನು ಹಾಗೂ ದ್ವಿತೀಯ ಪಿ.ಯು.ಸಿ.ಯ ಮೂರೂ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರನ್ನು ಅವರ ಪೋಷಕರ ಸಮ್ಮುಖದಲ್ಲಿ ನಗದು ಬಹುಮಾನ ನೀಡಿ ಪುರಸ್ಕಾರಿಸಲಾಯಿತು.
ಸಂಘದ ಅಧ್ಯಕ್ಷ ಸಿ.ರಮಾನಂದ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷ ಜಗದೀಶ ನಾವಡ ನಿವೃತ್ತರ ಕುರಿತು ಅಭಿನಂದನೆಯ ನುಡಿಗಳನ್ನಾಡಿದರು.
ಶೈಲಜಾ ಉರಾಳರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಪ್ರೊ. ಎಚ್.ವಿ. ಸೋಮಯಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಸುಧಾಕರ್ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಪಿ. ಪ್ರಕಾಶ್ ಹೇರ್ಳೆ ಆಯ-ವ್ಯಯ ಪತ್ರವನ್ನು ಮಂಡಿಸಿದರು.ಪಿ.ಮಂಜುನಾಥ ಉಪಾಧ್ಯ ಪ್ರತಿಭಾ ಪುರಸ್ಕಾರ ನಡೆಸಿ ಕೊಟ್ಟರು.ನಿವೃತ್ತರಾಗುವ ಸದಸ್ಯರ ಸ್ಥಾನದಲ್ಲಿ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜಿ.ಸಂಜೀವ ಸಂಯೋಜಿಸಿದ ಕಾರ್ಯಕ್ರಮದಲ್ಲಿ ಗೌರವ ಉಪಾಧ್ಯಕ್ಷರಾದ ವೆಂಕಟೇಶ ಉಡುಪ, ಪ್ರೇಮಾನಂದ್ ಮತ್ತು ಪ್ರೀತಿ ರೇಖಾ ಉಪಸ್ಥಿತರಿದ್ದರು. ಶ್ರೀಪತಿ ಹೇರ್ಳೆ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ವೈ.ಸದಾರಾಮ ಹೇರ್ಳೆ ಧನ್ಯವಾದ ಸಮರ್ಪಿಸಿದರು.
ಮಹಾಸಭೆಯ ನಂತರ ನಡೆದ ಮೊದಲ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಿ.ರಮಾನಂದ ಭಟ್ ಇವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಕೋಶಾಧಿಕಾರಿಯಾಗಿ ಪಂಜು ಪೂಜಾರಿಯವರು ಆಯ್ಕೆಯಾದರು.ಉಳಿದಂತೆ ಕಳೆದ ಸಾಲಿನ ಪದಾಧಿಕಾರಿಗಳನ್ನು ಮುಂದುವರಿಸಲು ತೀರ್ಮಾನಿಸಲಾಯಿತು.
ತನ್ನ ಆಯ್ಕೆಗೆ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷರು ತಂಡಸ್ಫೂರ್ತಿಯಿಂದ ಸಂಘಟನೆಯನ್ನು ಬಲಪಡಿಸಲು ಸರ್ವರ ಸಹಕಾರ ಕೋರಿದರು.
0 ಕಾಮೆಂಟ್‌ಗಳು