Header Ads Widget

ನ್ಯಾಯಮೂರ್ತಿ ಮೇಲೆ ಹಲ್ಲೆ:ಅಂಬೇಡ್ಕರ್ ಯುವಸೇನೆ ಪ್ರತಿಭಟನೆ

ಅಂಬೇಡ್ಕರ್ ಆಶಯಗಳ ಪ್ರತಿಪಾದಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ಸನಾತನಿ ವಕೀಲ ರಾಕೇಶ್ ಕಿಶೋರ್‌ನನ್ನು ಭಾರತದಿಂದ ತಕ್ಷಣ ಗಡಿಪಾರು ಮಾಡುವಂತೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

  ಇಂದು ಉಡುಪಿಯ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ವಕೀಲನ ಪ್ರತಿಕೃತಿ ದಹಿಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ.

   ಭಾರತದ ಆಡಳಿತ ವ್ಯವಸ್ಥೆ ಇರುವುದು ಧಾರ್ಮಿಕ ಗ್ರಂಥಗಳ ಆಧಾರದ ಮೇಲಲ್ಲ.ಬದಲಾಗಿ ಈ ದೇಶ ಸಂವಿಧಾನದ ಆಧಾರದ ಮೇಲೆ. ಸಂವಿಧಾನದ ಮುಖ್ಯವಾದ ಅಂಗ ನ್ಯಾಯಾಂಗ.ಆ ನ್ಯಾಯಾಲಯಗಳಲ್ಲೇ ಮುಖ್ಯವಾದದ್ದು ಸರ್ವೋಚ್ಚ ನ್ಯಾಯಾಲಯ.ಇದೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಹಿಂದೂ ಧರ್ಮವೇ ಅಲ್ಲ ಅದೊಂದು ಜೀವನ ಪದ್ಧತಿ ಈ ಜೀವನ ಪದ್ಧತಿ ನಿಂತಿರುವುದು ಶೃತಿಗಳ ಮತ್ತು ಸ್ಮೃತಿಗಗಳ ಮೇಲೆ ಎಂದರು.

  ನ್ಯಾಯಮೂರ್ತಿ ಗವಾಯಿಯವರ ಮೇಲೆ ಶೂ ಎಸೆದ ಈ ದಾಳಿಯನ್ನು ಸಹಿಸುವುದಿಲ್ಲ ಎಂದ ಜಯನ್ ಮಲ್ಪೆ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅವಮಾನ ಎಂದರು.

  ಚಿಂತಕ ಗಣನಾಥ ಎಕ್ಕಾರು ಮಾತನಾಡಿ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ನಮ್ಮ ಸಂವಿಧಾನ ಘನತೆಯಿಂದ ಸಾಗುತ್ತಿದೆ. ಇಂತಹ ಅವಮಾನಕರ ಘಟನೆ ಇಡೀ ಭಾರತವನ್ನೇ ಅವಮಾನಿಸಿದದ್ದಂತೆ.ನಾವು ಸಂವಿಧಾನದ ಆಶಯವನ್ನು ಉಳಿಸದೇ ಹೋದರೆ ದೇಶಕ್ಕೆ ಗಂಡಾAತರ ತಪ್ಪಿದ್ದಲ್ಲ ಎಂದರು.

  ಹಿರಿಯ ದಲಿತ ಮುಖಂಡ ಶೇಖರ ಹೆಜಮಾಡಿ ಮಾತನಾಡಿ, ದಲಿತರ ಮತ್ತು ಮಹಿಳೆಯರ ಎಳಿಗೆಯನ್ನು ಸಹಿಸದ ಮನುಸೃತಿ ಎಂತಹ ಬದುಕು ನೀಡಿದೆ ಎಂಬುದನ್ನು ಗಮನಿಸಬೇಕು ಗವಮಿಸಬೇಕು.ಸಂವಿಧಾನ ಬದಲಾವಣೆಗೆ ಸಂಘಪರಿವಾರ ಪ್ರಯತ್ನಿಸಿದರೆ ದೇಶ ದಂಗೆ ಎಳುತ್ತದೆ ಎಂದರು.

ದಸಂಸ ಭೀಮವಾದರ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ ಮಾತನಾಡಿ ಭಾರತ ಇಂದು ಬುದ್ಧಮಯಾವಾಗುತ್ತಿದೆ ಇದನ್ನು ಸಹಿಸದ ಸನಾತನವಾದಿಗಳು ಇಂತಹ ದೌರ್ಜನ್ಯವನ್ನು ಸುರುಮಾಡಿದ್ದಾರೆ, ಇವರ ಕುತಂತ್ರ ಪಿತೂರಿಗೆ ದಲಿತರು ಬಳಿಯಾಗಬಾರದು ಎಂದರು.

 ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾಬಲ ಕುಂದರ್,ಚಾಲ್ಸ್ ಅಂಬ್ಲರ್, ಇದ್ರಿಸ್ ಹೂಡೆ, ಕೃಷ್ಣ ಬಂಗೇರ,ಲಕ್ಷö್ಮಣ ಬೈದೂರು,ರಾಮ ಮಯ್ಯಾಡಿ, ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ವಸಂತ ಪಾದೆಬೆಟ್ಟು,ದಯಾಕರ್ ಮಲ್ಪೆ,ಮಾಧವ ಕರ್ಕೇರ,  ಸಾಧು ಚಿಟ್ಪಾಡಿ, ಧನಂಜಯ, ರವಿರಾಜ್ ಲಕ್ಷ್ಮೀನಗರ, ವಿಶ್ವನಾಥ ಹಾಳೇಕಟ್ಟೆ, ಶೋಭಾ ನಾಯ್ಕ್, ಶರತ್ ಶೆಟ್ಟಿ ತೆಂಕನಿಡಿಯೂರು, ಕಮಲ್ ಮಲ್ಪೆ, ಪುಷ್ಪ ಆಂಚನ್, ಸತೀಶ್ ಕಪ್ಪೆಟ್ಟು, ಸಂತೋಷ್ ಮೂಡುಬೆಟ್ಟು ದಾಮೋದರ ನಾಯ್ಕ, ಧನಪಾಲ್, ವಿನಯ ಕೊಡಂಕೂರು ಮುಂತಾದವರು ಭಾಹವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು