ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಉಡುಪಿ ಜಿಲ್ಲಾ ವೇದಿಕೆಯವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಿದ ರಾಜ್ಯಮಟ್ಟದ ನಮ್ಮ ಸಂಸ್ಕೃತಿ ಚಿತ್ರಕಲಾ ಸ್ಪರ್ಧೆಯಲ್ಲಿ ಆದಿವುಡುಪಿ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅಮೋಘ್ ಎಸ್. ರಾವ್ ಕಂಬಳಕಟ್ಟ ಇವರು ತೃತೀಯ ಬಹುಮಾನ ಪಡೆದಿರುತ್ತಾರೆ. ವೇದಿಕೆಯಲ್ಲಿ ಆಮಂತ್ರಣ ಪರಿವಾರದ ರಾಜ್ಯಾಧ್ಯಕ್ಷರಾದ ವಿಜಯ ಕುಮಾರ್ ಜೈನ್, ಉಡುಪಿ ಜಿಲ್ಲಾ ವೇದಿಕೆಯ ಅಧ್ಯಕ್ಷೆ ಪುಷ್ಪ ಪ್ರಸಾದ್, ಬ್ರಹ್ಮಾವರ ತಾಲೂಕು ವೇದಿಕೆಯ ಅಧ್ಯಕ್ಷೆ ಸುಮಾ ಕಿರಣ್ ಹಾಗೂ ಆಮಂತ್ರಣ ಪರಿವಾರದ ಇತರ ಜಿಲ್ಲೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು