Header Ads Widget

ಬ್ರಾಹ್ಮಣ ಮಹಾಸಭಾ ಪುತ್ತೂರು - ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರ್ ದಿನಾಚರಣೆ

 

ಪುತ್ತೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಸಪ್ಟೆಂಬರ್ ತಿಂಗಳ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರ್ಸ್ ದಿನಾಚರಣೆಯನ್ನು ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಳದ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಹಿರಿಯ ಶಿಕ್ಷಕರಾದ ಡಾ. ಪಿ. ಶ್ರೀಪತಿ ರಾವ್ ಮತ್ತು ಶ್ರೀಮತಿ ಶಾಂತಾ ಉಪಾಧ್ಯ ಇವರನ್ನು ಹಾಗೂ ಇಂಜಿನಿಯರ್ಸ್ ದಿನಾಚರಣೆಯ ಅಂಗವಾಗಿ ಖ್ಯಾತ ಸಿವಿಲ್ ಇಂಜಿನಿಯರ್ ಟಿ. ಸೀತಾರಾಮ ಕೇಕುಡ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಹಿಂದಿ ಶಿಕ್ಷಕರಾದ ಶ್ರೀ ಯು.ಎಸ್. ರಾಜಗೋಪಾಲ ಆಚಾರ್ಯ ಇವರು ಮಾತನಾಡುತ್ತಾ ಉದಾಸೀನವೇ ನಮ್ಮ ಶತ್ರು, ನಮ್ಮ ಯುವ ಪೀಳಿಗೆ ಆಲಸ್ಯವನ್ನು ಬಿಟ್ಟು ಜಾಗೃತರಾಗಿ ಇಂತಹ ಕಾರ್ಯಕ್ರಮಗಳಲ್ಲಿ ನಮ್ಮದೇ ಮನೆಯ ಕೆಲಸ ಎಂದು ತಿಳಿದುಕೊಂಡು ಭಾಗವಹಿಸಿ ಸಂಘಟನೆಯನ್ನು ಬಲಪಡಿಸಲು ಸರಿಯಾದ ಕಾಲಘಟ್ಟ ಇದಾಗಿದೆ. ಪೂರ್ವಜನ್ಮದ ಪುಣ್ಯದ ಫಲದಿಂದ ಮನುಷ್ಯರಾಗಿ ಹುಟ್ಟಿದ್ದೇವೆ. ಪ್ರತಿಯೊಂದು ಕೆಲಸವನ್ನು ಭಗವಂತನೇ ನಮ್ಮಿಂದ ಮಾಡಿಸುವುದು, ನಾವು ನಿಮಿತ್ತ ಮಾತ್ರ ಎಂದು ತಿಳಿದು ದೇವರಿಗೆ ಕೃತಜ್ಞತೆಯನ್ನು ಅರ್ಪಿಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ ಎಂದು ಅಭಿಪ್ರಾಯ ಪಟ್ಟರು. ಉಪಸ್ಥಿತರಿದ್ದ ವಲಯದ ಎಲ್ಲಾ ಶಿಕ್ಷಕರನ್ನು ಮತ್ತು ಇಂಜಿನಿಯರ್ ಗಳನ್ನು ಹೂವಿನ ಸಸಿಗಳನ್ನು ನೀಡುವ ಮೂಲಕ ಗೌರವಿಸಲಾಯಿತು. ಖ್ಯಾತ ವೈದ್ಯರಾದ ಡಾ ಚಂದ್ರಶೇಖರ್ ಅಡಿಗ ಅವರು ಉಚಿತ ಆರೋಗ್ಯ ತಪಾಸಣೆ ನಡೆಸಿಕೊಟ್ಟರು. ಸಪ್ಟಂಬರ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವೈವಾಹಿಕ ವಾರ್ಷಿಕೋತ್ಸವ ಆಚರಿಸಿದ ವಲಯದ ಸದಸ್ಯರನ್ನು ಅಭಿನಂದಿಸಲಾಯಿತು. ಮಹಾಸಭಾದ ಕೋಶಾಧಿಕಾರಿ ಕೆ.ಜಿ. ರಾಮಚಂದ್ರ ರಾವ್, ಆಪದ್ಬಾಂಧವ ಸೇವಾ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು. ಮಹಾಸಭಾ ಅಧ್ಯಕ್ಷರಾದ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಜಾನಕಿ ಶರ್ಮಾ, ಶ್ರೀನಿವಾಸ್ ಶರ್ಮಾ, ರಾಮದಾಸ ಉಡುಪ, ಸುಬ್ರಹ್ಮಣ್ಯ ಉಡುಪ, ಸುರೇಶ ಕಾರಂತ್, ಚೈತನ್ಯ ಎಂ.ಜಿ., ವಿಜಯಕುಮಾರ್, ಸುನೀತಾ ಚೈತನ್ಯ, ಶ್ರೀಲಕ್ಷ್ಮಿ ಉಪಾಧ್ಯ, ಅನ್ನಪೂರ್ಣ ಉಪ್ಪೂರ, ಶುಭಪ್ರಸಾದ್ ಸಹಕರಿಸಿದರು. ದುರ್ಗಾಪ್ರಸಾದ್ ಭಾರ್ಗವ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಿರಂಜನ್ ಭಟ್ ವಂದನಾರ್ಪಣೆಗೈದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು