Header Ads Widget

ಉಡುಪಿ : ಬ್ಯೂಟಿ ಪಾರ್ಲರ್‌ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ!

ಉಡುಪಿಯ ನ್ಯಾಯಾಲಯದ ಎದುರಿನ ಮಾಂಡವಿ ಕೋರ್ಟ್ ಕಟ್ಟದಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಬ್ಯೂಟಿ ಪಾರ್ಲರ್ ನಲ್ಲಿದ್ದ ಫರ್ನಿಚರ್, ಸೋಫಾ ಹಾಗೂ ಬ್ಯೂಟಿಷನ್ ಪರಿಕರಗಳು ಬೆಂಕಿಗಾಹುತಿಯಾಗಿದೆ. ಪಾರ್ಲರ್ ಒಳಗೆ ದಟ್ಟಹೊಗೆ ಆವರಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ. ಸಮೀಪದಲ್ಲೇ ವಕೀಲ ಕಚೇರಿಗಳಿದ್ದು, ಅಲ್ಲಿಗೂ ಬೆಂಕಿ ಹಬ್ಬುವ ಸಾಧ್ಯತೆ ಇತ್ತು. ಆದರೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ, ಬೆಂಕಿ ನಂದಿಸಿ ಸಂಭವನೀಯ ಅನಾಹುತವೊಂದನ್ನು ತಪ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು