ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಉತ್ಸವ ಮೂರ್ತಿ ಪೇಟೆ ಉತ್ಸವದ ಸಂದರ್ಭ ವಿರಾಜಮಾನವಾಗುವ ಸಲುವಾಗಿ ಸುಧೀಂದ್ರನಗರದಲ್ಲಿ ಏಳು ಮನೆಗಳ ನಿವಾಸಿಗಳು ನೂತನವಾಗಿ ನಿರ್ಮಿಸಿದ ಶ್ರೀ ಸುಧೀಂದ್ರ ಪೀಠದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 27 ರಂದು ನಡೆಯಿತು.
ವೇದಮೂರ್ತಿ ಕೆ. ಕಾಶೀನಾಥ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ವೇದಮೂರ್ತಿ ಗಣಪತಿ ಭಟ್, ಜಯದೇವ ಭಟ್, ಗಣೇಶ್ ಭಟ್, ಮಹೇಶ್ ಭಟ್, ರಾಮಚಂದ್ರ ಅವಧಾನಿ, ಜಯದೇವ ಪುರಾಣಿಕ್ ದೇವವಾಸ್ತು, ರಾಕ್ಷೋಜ್ಞ ಹೋಮ, ಬಲಿಪೂಜೆ ನಡೆಸಿಕೊಟ್ಟರು. ಜಿ. ಗೋಕುಲದಾಸ್ ನಾಯಕ್ ಮತ್ತು ಮಧುವಂತಿ ಜಿ ನಾಯಕ್ ದಂಪತಿಗಳು ಪೂಜಾ ಕಾರ್ಯದ ನೇತೃತ್ವ ವಹಿಸಿದರು. ಮಹಾಪೂಜೆಯ ನಂತರ ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ವೆಂಕಟರಾಯ ಮಲ್ಯ, ರಮೇಶ್ ಪೈ, ಮಧುಕರ ನಾಯಕ್, ಲಕ್ಷ್ಮೀನಾರಾಯಣ ನಾಯಕ್, ವಿದ್ಯಾ ಕಿಣಿ, ಕೆ. ಹರೀಶ್ ಭಟ್ ಹಾಗೂ ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು