ನಗರಸಭೆ ಉಡುಪಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಡವೂರು, ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ ಕೊಡವೂರು, ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಪಶುಪಾಲನ ಹಾಗೂ ಪಶುವೈದ್ಯ ಸೇವಾ ಇಲಾಖೆ ಉಡುಪಿ, ಪಶು ಚಿಕಿತ್ಸಾಲಯ ಮಲ್ಪೆ ಇವರ ಸಹಭಾಗಿತ್ವದಲ್ಲಿ ಸೆ.28ರಂದು ಕೊಡವೂರು ಯುವಕ ಸಂಘದ ಕಾರ್ಯಾಲಯದಲ್ಲಿ ನಾಯಿ, ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರಸಭಾ ಸದಸ್ಯ ವಿಜಯ ಕೊಡವೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನಮ್ಮೊಂದಿಗೆ ಜೀವಿಸುವ ಪ್ರಾಣಿ ಪಕ್ಷಿಗಳ ಆರೋಗ್ಯದ ಬಗ್ಗೆಯೂ ಕೂಡ ಗಮನಹರಿಸಬೇಕೆಂದರು.ಹಾಗೆಯೇ ಇಲ್ಲಿ ಕಳೆದ ಏಳು ವರ್ಷಗಳಿಂದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ನಾಯಿ,ಬೆಕ್ಕುಗಳಲ್ಲಿ ರೇಬಿಸ್ ತಡೆಗಟ್ಟಲು ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮಲ್ಪೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಕೀರ್ತಿ ಶೆಟ್ಟಿಯವರು ಮಾರಣಾಂತಿಕ ರೇಬಿಸ್ ರೋಗ ಲಕ್ಷಣಗಳ ಬಗ್ಗೆ ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.ಕಡೆಕಾರ್ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವರುಣ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಯುವಕ ಸಂಘದ ಅಧ್ಯಕ್ಷ ದೀಪಕ್.ವಿ ದೇವಾಡಿಗ,ಮಲ್ಪೆ ಪಶು ಚಿಕಿತ್ಸಾಲಯದ ಸಹಾಯಕಿ ಶಕುಂತಲಾ ಉಪಸ್ಥಿತರಿದ್ದರು.
ದೀಪಕ್ ಕೊಡವೂರು ಸ್ವಾಗತಿಸಿದರು. ಅಶೋಕ್ ಶೆಟ್ಟಿಗಾರ್ ವಂದಿಸಿದರು.
0 ಕಾಮೆಂಟ್‌ಗಳು