Header Ads Widget

"ಶ್ರೀ ಸುಮುಖನ ಭಕ್ತ" ದೃಶ್ಯ - ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು ಉಡುಪಿ ಇಲ್ಲಿ ದಿನಾಂಕ 3 ಅಕ್ಟೋಬರ್ 2025 ರಂದು ನಾಡೋಜ ಡಾಕ್ಟರ್ ಜಿ ಶಂಕರ್ ಅವರ 70ನೇ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ "ಶ್ರೀ ಸುಮುಖನ ಭಕ್ತ" ದೃಶ್ಯ - ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. 

 ಡಾ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ S k ಆನಂದ್ ಅವರು ದೃಶ್ಯ - ಧ್ವನಿ ಸುರುಳಿ ಬಿಡುಗಡೆ ಮಾಡಿದರು.

ಸಾಹಿತ್ಯವನ್ನು ಶ್ರೀಮತಿ ಲಲಿತಾ ರಚಿಸಿದ್ದು, ಗಾಯನ, ಸಂಗೀತ ಸಂಯೋಜನೆ ಮತ್ತು ದ್ವನಿ ಮುದ್ರಣವನ್ನು ಶ್ರೀ ರವಿ ಕಾರಂತ್ ಬಿ. ಕೋಟ ಇವರು ಮಾಡಿರುತ್ತಾರೆ. ಸಹ ಗಾಯನದಲ್ಲಿ ಪ್ರಸನ್ನ ಭಟ್ ಯಲ್ಲಾಪುರ, ಶ್ರೀ ಬಾಲಕೃಷ್ಣ ಕೊಡವೂರು, ಕುಮಾರಿ ನಿಹಾರಿಕಾ ಮಲ್ಪೆ ದ್ವನಿ ನೀಡಿದ್ದಾರೆ. ನಾಗೇಂದ್ರ ಭಟ್ ಯಲ್ಲಾಪುರ ದೃಶ್ಯ ಸಂಕಲನ ಮಾಡಿದ್ದಾರೆ.

ಶ್ರೀ ಶಂಕರ್ ಸಾಲ್ಯಾನ್, ಶ್ರೀ ಜಗದೀಶ್ ಕೋಟ್ಯಾನ್, ಶ್ರೀ ರಾಮಕೃಷ್ಣ ಭಟ್, ಶ್ರೀ ಭೋಜರಾಜ್ ಕಿದಿಯೂರು, ಶ್ರೀಮತಿ ಸ್ಟಾನ್ಸಿ, ಪ್ರೊ. ರಾಜಮೋಹನ್, ಪ್ರೊ. ನಾಗರಾಜ್ ವೈದ್ಯ, ಶ್ರೀ ಅಶೋಕ್ ಮಲ್ಪೆ, ಶ್ರೀಮತಿ ಮಂಗಲಾ ಭಟ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಗೀತಮ್ ವಾದ್ಯಮ್ ಸಂಸ್ಥೆಯ ಸಂಚಾಲಕರಾದ ಪ್ರಸನ್ನ ಭಟ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು