ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ ಕೆನರಾ ಬ್ಯಾಂಕ್ ಎಟಿಎಂ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತ ಬೈಕ್ ಸವಾರನ ತಲೆ ಜಜ್ಜಿ ಹೋಗಿದ್ದು ಪುತ್ತೂರು ಮೂಲದ ರಮೇಶ್ ಹೆಗ್ಡೆ (58) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಪುತ್ತೂರು ನೋಂದಣಿ ಇರುವ ಬೈಕಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದು, ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ, ಮೂಳೂರು ಅಂಬುಲೆನ್ಸ್ ನ ಹಮೀದ್, ರಈಸ್, ರಝಾಕ್, ಅನ್ವರ್ ಕೋಟೇಶ್ವರ, ಸಾದಿಕ್ ಪಡುಬಿದ್ರೆ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಸ್ಥಳಕ್ಕೆ ಆಗಮಿಸಿರುವ ಪಡುಬಿದ್ರೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
0 ಕಾಮೆಂಟ್‌ಗಳು