Header Ads Widget

ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ- ನವರಾತ್ರಿಯಲ್ಲಿ ನಿತ್ಯವೂ ‘ಭಕ್ತರ ದಂಡು, ಅಚ್ಚುಕಟ್ಟಾದ ವ್ಯವಸ್ಥೆೆ

ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ 19ನೇ ವರ್ಷದ ನವರಾತ್ರಿಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರುತ್ತಿದ್ದು, ದಿನನಿತ್ಯವೂ ಭಕ್ತರ ದಂಡು ಆಗಮಿಸುತ್ತಿದೆ. ಇಲ್ಲಿ ದಿನಾಲೂ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ವಿಜಯದಶಮಿ ಪರ್ವಕಾಲದಲ್ಲಿ ತ್ರಿಶಕ್ತಿ ಮಹಾಯಾಗ, ಬಲಿ ಉತ್ಸವ, ರಂಗ ಪೂಜಾ ಮಹೋತ್ಸವ, ನಿರಂತರ ಅನ್ನಸಂತರ್ಪಣೆ, ಸಾಂಸ್ಕೃತಿಕ ವೈಭವ ಹೀಗೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಕ್ಷೇತ್ರವು ನವರಾತ್ರಿ ಸಂಭ್ರಮಕ್ಕೆ ಸಾಕ್ಷಿತವಾಗಿದೆ. ಬರಡು ಭೂಮಿಯಾಗಿದ್ದ ತಾಣ ರಮಾನಂದ ಗುರೂಜಿಯವರಿಗೆ ಆಧ್ಯಾತ್ಮಿಕ ಕಂಪನವನ್ನು ಗೋಚರಿಸಿ ಭೂಗತ ಶಕ್ತಿ ಕ್ಷೇತ್ರವನ್ನು ಪುನಶ್ಚೇತನವನ್ನಾಾಗಿಸಿ, ಪ್ರಧಾನ ಶಕ್ತಿಯಾದ ಶ್ರೀ ದುರ್ಗಾ ಆದಿಶಕ್ತಿಿ ದೇವಿ ಬೇಡಿ ಬಂದ ಭಕ್ತರ ಇಷ್ಟಾಾರ್ಥ ಕರುಣಿಸಿ ‘ಕ್ತರ ಮನೆ ಮನ ಬೆಳಗುತ್ತಿದ್ದಾಳೆ. ದೇವಿಯ ದರ್ಶನಕ್ಕೆೆ ಪ್ರಾಾತಃ ಕಾಲದಿಂದಲೇ ಕ್ಷೇತ್ರದಲ್ಲಿ ಭಕ್ತರು ಹರಿದು ಬರುತ್ತಿಿದ್ದಾಾರೆ. ದಿನಂಪ್ರತಿ 5 ಸಾವಿರಕ್ಕೂ ಮಿಕ್ಕಿದ ಭಕ್ತರು ಕ್ಷೇತ್ರ ಸಂದರ್ಶಿಸಿದರೆ, 3 ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.

ವಾಸುದೇವನ್ ಚೆನ್ನೆೆ ದಂಪತಿ ಹಾಗೂ ಮಿಹಿಕಾ ವಿರಾಜ್ ಶೆಟ್ಟಿ ದಂಪತಿಯಿಂದ ಚಂಡಿಕಾಯಾಗ, ಸಾಲಿಗ್ರಾಮ ವಿಪ್ರ ಮಹಿಳಾ ಭಜನಾ ಮಂಡಳಿ, ಕಡಿಯಾಳಿ ಮಹಿಷಮರ್ದಿನಿ ‘ಜನಾ ಮಂಡಳಿಯಿಂದ ‘ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನಶ್ರೀ ಸ್ಕೂಲ್ ಆಫ್ ಮ್ಯೂಸಿಕ್ ಇವರಿಂದ ಸುಗಮ ಸಂಗೀತ,ದರ್ಪಣ ಡ್ಯಾಾನ್‌ಸ್‌ ಎಕಾಡೆಮಿ ಅವರಿಂದ ಅಭಿರಾಮ ಭಾಮ ನಾಟ್ಯ ಸಂಗೀತ ಉತ್ಸವ, ಬೈಲೂರು ಸಂಜೀವ ಪೂಜಾರಿ ಮತ್ತು ಮನೆಯವರಿಂದ ದುರ್ಗಾ ನಮಸ್ಕಾಾರ ಪೂಜೆ ನೆರವೇರಿತು. ಮಧ್ಯಾಹ್ನ ತನ್ವಿ, ಸಮನ್ವಿ, ಅಮೃತ ಆಶ್ಲೇಷ,ಅದಿತಿ ಮೆಹೆಂದಲೇ, ಸಾನ್ವಿ, ಅನ್ನಪೂರ್ಣೆಯರಿಂದ ನೃತ್ಯಸೇವೆ ನೆರವೇರಿತು.

ಅಚ್ಚುಕಟ್ಟಾದ ವ್ಯವಸ್ಥೆೆ

ಕ್ಷೇತ್ರದಲ್ಲಿ ಪ್ರತಿಯೊಂದು ಕಾರ್ಯವೂ ಅಚ್ಚುಕಟ್ಟಾಾಗಿ ನೆರವೇರುತ್ತಿದ್ದು, ಸೇವಾರ್ಥಿಗಳಿಗೆ ವಿಶೇಷ ವ್ಯವಸ್ಥೆೆ ಕಲ್ಪಿಿಸಲಾಗಿದೆ. ನೃತ್ಯ ಸೇವಾರ್ಥಿಗಳಿಗೆ ವಿಶೇಷ ಮಾನ್ಯತೆ ದೊರಕುತ್ತಿದೆ. ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದ ಏಕಕಾಲದಲ್ಲಿ 1 ಸಾವಿರಕ್ಕೂ ಮಿಕ್ಕಿಿದ ‘ಕ್ತರಿಗೆ ಉಣಿಸಲಾಗುತ್ತಿದೆ. ಕ್ಷೇತ್ರದ ಅನ್ನಪೂರ್ಣ ಭೋಜನಾಲಯ, ಆದಿಶಕ್ತಿ ಸಭಾಭವನ, ಸರಸ್ವತಿ‘ವನ ಹೀಗೆ ಏಕಕಾಲದಲ್ಲಿ ಅನ್ನಪ್ರಸಾದ ವಿತರಣೆಯಾಗುತ್ತದೆ. ‘ಕ್ತರೂ ಕೂಡ ಅಷ್ಟೇ ಭಕ್ತಿಯಿಂದ ಅನ್ನಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆೆ ಪಾತ್ರರಾಗುತ್ತಿದ್ದಾರೆ. ದೂರದ ಊರಿನಿಂದ ಅಸಂಖ್ಯಾಾತ ಭಕ್ತರು ದೇವಿಯ ದರ್ಶನಕ್ಕೆೆ ‘ಾವಿಸುತ್ತಿಿದ್ದಾರೆ. ಮ‘್ಯಾಹ್ನ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಯಿತು. ಬೆಳಗ್ಗಿಿನಿಂದ ರಾತ್ರಿಿಯವರೆಗೂ ಭಕ್ತರು ಕ್ಷೇತ್ರಕ್ಕೆೆ ಆಗಮಿಸುತ್ತಲೇ ಇದ್ದಾಾರೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾಾರೆ.


ಅಕ್ಕಿ ಸೇವೆ ವಿಶೇಷ

ನವರಾತ್ರಿಿಯ ಪರ್ವಕಾಲದಲ್ಲಿ ‘ಕ್ತರನ್ನು ಸಂತೃಪ್ತಿಿಗೊಳಿಸುವ ಅನ್ನ ಸಂತರ್ಪಣೆ, ಸಹಾಸ್ರಾಾರು ‘ಕ್ತರು ಬರುವ ಈ ಕ್ಷೇತ್ರದಲ್ಲಿ ಬಾಳೆಎಲೆಯಲ್ಲಿಯೇ ಊಟ ಬಡಿಸುವ ಸಂಪ್ರದಾಯ ಬೆಳೆದು ಬಂದಿದೆ. ‘ಭಕ್ತರಿಂದ ಪದ್ಧತಿ ಮಾಡುವಂತೆ ವಿನಂತಿ, ಮನವಿ, ಒತ್ತಾಾಯವಿದ್ದರೂ ಗುರೂಜಿಯವರು ಈ ಬಗ್ಗೆೆ ದೇವಿಯಲ್ಲಿ ವಿಮರ್ಶಿಸಿ ತೀರ್ಮಾನ ಕೈಗೊಳ್ಳುವ ದೃಢ ಸಂಕಲ್ಪದಲ್ಲಿದ್ದಾರೆ. ಕ್ಷೇತ್ರದಲ್ಲಿ ಅನ್ನಪ್ರಸಾದ ದೇವಿಯ ವಿಶೇಷ ಪ್ರಸಾದವಾದ ನೆಲೆಯಲ್ಲಿ ಪ್ರಧಾನ ಸೇವೆಯಾಗಿ ಅಕ್ಕಿ ಸೇವೆಯಾದರೆ, ದೇವಿಯ ಪ್ರೇರಣೆಯಲ್ಲಿ ದೇವಿಗೆ ಅಭಿಮುಖವಾಗಿ ಅಕ್ಕಿಯ ಹುಂಡಿಯನ್ನು ಇರಿಸಲಾಗಿದ್ದು, ‘ಭಕ್ತರು ಮನಸಂಕಲ್ಪ ಈಡೇರಿಕೆಗೆ ಯಥಾನುಸಾರ ಅಕ್ಕಿಯನ್ನು ಸಮರ್ಪಿಸುತ್ತಿದ್ದಾರೆ. ಅಥವಾ ಕ್ಷೇತ್ರದಲ್ಲಿ ಅಕ್ಕಿಿಯ ಬಾಬ್ತು ಹಣ ನೀಡಿದಾಗ ಕೊಡಲ್ಪಡುವ ಅಕ್ಕಿಯನ್ನು ಸಮರ್ಪಿಸಲು ಅವಕಾಶವಿದೆ. ಅಕ್ಕಿ ಸೇವೆ ನೀಡಿದ ‘ಭಕ್ತರು ಮನದಿಚ್ಛೆೆಯನ್ನು ಪೂರೈಸಿಕೊಂಡ ಸಾವಿರಾರು ನಿದರ್ಶನಗಳಿವೆ. ‘ಭಕ್ತರು ಸಮರ್ಪಿಸುವ ಒಂದು ಮುಷ್ಟಿ ಅಕ್ಕಿಯೇ ಇಲ್ಲಿ ಅಕ್ಷಯವಾಗುತ್ತಿದೆ ಎಂಬುದು ದೃಢನಂಬಿಕೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು