ಪೆರಂಪಳ್ಳಿ : ಕ್ರೇನ್ ಹರಿದು ಪಾದಚಾರಿ ಗಂಭೀರ!

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕ್ರೈನ್ ಹರಿದ ಘಟನೆ ಉಡುಪಿ ಪೆರಂಪಳ್ಳಿಯ ಹೆರ್ಗ ಸೊಸೈಟಿಯ ಮುಂಭಾಗದಲ್ಲಿ ಸಂಭವಿಸಿದೆ.

ವ್ಯಕ್ತಿಯು ಕ್ರೈನ್ ನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಎದುರಿನಲ್ಲಿ ಬರುತ್ತಿದ್ದ ಕಾರಿಗೆ ಸೈಡ್ ಕೊಡುವ ಭರದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಚಾಲಕ ಕ್ರೈನ್ ಹರಿಸಿದ್ದಾನೆ. ಬಳಿಕ ಕ್ರೈನ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು