ಕಳೆದ ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಿಂದ ಹಿಂದಿರುಗಿದ ಮರುದಿನ SEMICON ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಆಗ ಅವರು, ನಾನು ಚೀನಾಕ್ಕೆ ಹೋಗಿ ವಾಪಸ್ ಬಂದೆ ಎಂದಾಗ ಸಭಿಕರು ಭಾರಿ ಚಪ್ಪಾಳೆ ತಟ್ಟಿದ್ದರು. ಆಗ ಕೂಡಲೇ ಪ್ರಧಾನಿ ಮೋದಿ, "ನಾನು ಚೀನಾಕ್ಕೆ ಹೋಗಿದ್ದಕ್ಕಾಗಿ ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದಕ್ಕಾಗಿ ಚಪ್ಪಾಳೆ ತಟ್ಟುತ್ತಿ ದ್ದೀರಾ?" ಎಂದು ಪ್ರಶ್ನಿಸಿದ್ದಾಗ ಯಾರೂ ಇದರ ಒಳಾರ್ಥವನ್ನು ತಿಳಿಯಲೇ ಇಲ್ಲ.
ಆದರೆ, ಅಂದು ಆಗಿದ್ದೇ ಬೇರೆ. ಸ್ವಲ್ಪ ಹೆಚ್ಚೂ ಕಮ್ಮಿಯಾಗಿದ್ದರೂ ಪ್ರಧಾನಿ ಮೋದಿ ಅವರ ಪ್ರಾಣಕ್ಕೆ ಕಂಟಕವಿತ್ತು ಎನ್ನುವ ಶಾಕಿಂಗ್ ವಿಷ್ಯ ಇದೀಗ ರಿವೀಲ್ ಆಗಿದೆ.
ಅಧಿಕಾರಿ ನಿಗೂಢ ಸಾವು! : ಹಾಗಿದ್ದರೆ ಅಂದು ಅಲ್ಲಿ ನಡೆದದ್ದೇನು? ಅದರ ಬೆನ್ನಲ್ಲೇ ಬಾಂಗ್ಲಾದೇಶದ ಢಾಕಾದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಆಗಸ್ಟ್ 31 ರಂದು ಶವವಾಗಿ ಪತ್ತೆಯಾಗಿದ್ದು ಏಕೆ? ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚಿಗೂ, ಈ ಸಾವಿಗೂ ಸಂಬಂಧವಿದ್ಯಾ? ಇವೆಲ್ಲಾ ನಿಗೂಢಗಳು ಈಗ ಒಂದೊಂದಾ ಗಿಯೇ ಬಹಿರಂಗಗೊಳ್ಳುತ್ತಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧವೇ ಈಗ ಈ ಹತ್ಯೆಯ ಆರೋಪ ಕೇಳಿಬರುತ್ತಿದ್ದು, ಜಾಕ್ಸನ್ ಅವರ ನಿಗೂಢ ಸಾವಿನ ಬಗ್ಗೆಯೂ ಚರ್ಚೆಯಾಗುತ್ತಿದೆ. ಅಮೆರಿಕ ಮತ್ತು ಭಾರತದ ನಡುವೆ ಸುಂಕದ ಕುರಿತು ಜಟಾಪಟಿ, ಅದರ ನಡುವೆಯೇ, ರಷ್ಯಾ-ಭಾರತ-ಚೀನಾ ದೇಶಗಳು ಒಗ್ಗೂಡುತ್ತಿರುವುದನ್ನು ಸಹಿಸದ ಕಾರಣ ಇಂಥದ್ದೊಂದು ಸಂಚು ನಡೆದಿದೆ ಎಂದೇ ವಿಶ್ಲೇಷಿ ಸಲಾಗುತ್ತಿದೆ.
ಚೀನಾ-ಭಾರತದ ಸಂಬಂಧ ಹಾಳು ಮಾಡಲು ಪ್ಲ್ಯಾನ್? : ನರೇಂದ್ರ ಮೋದಿ ಅವರು ಚೀನಾಕ್ಕೆ ಹೋದ ಸಂದರ್ಭದಲ್ಲಿ, ಈ ಹತ್ಯೆಯ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಒಂದು ವೇಳೆ ಅಲ್ಲಿ ಹತ್ಯೆ ನಡೆದರೆ, ಭಾರತ ಮತ್ತು ಚೀನಾ ಸಂಬಂಧ ಹದಗೆಡುವ ಪ್ಲ್ಯಾನ್ ಮಾಡಲಾಗಿತ್ತು ಎನ್ನಲಾಗಿದೆ. ಅಷ್ಟಕ್ಕೂ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಎಂಬ ವ್ಯಕ್ತಿಯನ್ನು ಅಮೆರಿಕವು, ಮ್ಯಾನ್ಮಾರ್ ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾ ನೆರವು ನೀಡಲು ನಿಯೋಜಿಸುವ ನೆಪದಲ್ಲಿ ಸಕ್ರಿಯವಾಗಿರಿಸಿತ್ತು. ಆತನೇ ಈ ಹತ್ಯೆಯ ಸಂಚು ರೂಪಿಸಿದ್ದು, ಅದು ತಿಳಿಯುತ್ತಲೇ ಭಾರತದ ರಾ ಏಜೆಂಟ್ಸ್, ಆತನ ಕಥೆ ಮುಗಿಸಿದ್ದಾರೆ ಎನ್ನಲಾಗಿದೆ.
ಮೋದಿಗೆ ಕಾದ ರಷ್ಯಾದ ಅಧ್ಯಕ್ಷ : ಚೀನಾಕ್ಕೆ ಹೋದ ಸಂದರ್ಭದಲ್ಲಿಲ ಇನ್ನೊಂದು ಕುತೂಹಲದ ಘಟನೆಯೂ ನಡೆದಿದೆ. ಅದೇನೆಂದರೆ, ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಲು ರಷ್ಯಾ ಅಧ್ಯಕ್ಷ ವಾಡ್ಲಮಿರ್ ಪುಟಿನ್ ಅವರು ಏಕಾಏಕಿಯಾಗಿ ಹೋಗಿದ್ದೂ ಅಲ್ಲದೇ, ನರೇಂದ್ರ ಮೋದಿ ಅವರಿಗಾಗಿ ಕಾದು ಕುಳಿತು ಅವರನ್ನು ತಮ್ಮ ಕಾರಿನಲ್ಲೇ ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು! ಅಲ್ಲಿಗೆ ಪುಟಿನ್ ಅವರಿಗೆ ಈ ಸಂಚಿನ ಬಗ್ಗೆ ಮೊದಲೇ ಮನವರಿಕೆ ಯಾಗಿತ್ತೇ ಎನ್ನುವ ಅನುಮಾನವೂ ಇದೆ.
45 ನಿಮಿಷಗಳ ಸಂಭಾಷಣೆ: ಅಷ್ಟೇ ಅಲ್ಲದೇ ಮೋದಿ ಮತ್ತು ಪುಟಿನ್ ಅವರು ಕಾರಿನೊಳಗೇ ಸುಮಾರು 45 ನಿಮಿಷಗಳವರೆಗೆ ಸುದೀರ್ಘ ಸಂಭಾಷಣೆ ನಡೆಸಿರುವುದಾಗಿ ಹೇಳಲಾಗುತ್ತಿದೆ. ಹ*ತ್ಯೆಯ ಸ್ಕೆಚ್ ನಡುವೆಯೇ, ತರಾತುರಿಯಲ್ಲಿ ಹೋಟೆಲ್ಗೆ ಬಂದು ಮೋದಿ ಅವರನ್ನು ಕರೆದುಕೊಂಡು ಹೋಗಿದ್ದ ಪುಟಿನ್ ಅವರು ಮುಕ್ಕಾಲು ಗಂಟೆ ಕಾರಿನಲ್ಲಿ ಗುಟ್ಟಾಗಿ ಏನು ಸಂಭಾಷಣೆ ನಡೆಸಿದ್ದರು ಎನ್ನುವುದು ಕೂಡ ಈಗ ಕುತೂಹಲ ಕೆರಳಿಸಿದೆ. ಈ ಸಮಯದಲ್ಲಿ, ಮೋದಿ ಮತ್ತು ಪುಟಿನ್ ಅವರು, ಢಾಕಾದಲ್ಲಿ ಅಮೆರಿಕದ ಅಧಿಕಾರಿಯ ತಟಸ್ಥೀಕರಣಕ್ಕೆ ಕಾರಣವಾದ ಸಂಚು ಮತ್ತು ರಹಸ್ಯ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ವಿಶ್ಲೇಷಕರು ನಂಬಿದ್ದಾರೆ.
ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ದೀರ್ಘ ಇತಿಹಾಸ : ಅಷ್ಟಕ್ಕೂ ಭಾರತವನ್ನು ಅಸ್ಥಿರಗೊಳಿಸಲು ಸಿಐಎ ಮಾಡಿದ ಪ್ರಯತ್ನಗಳು ಹೊಸದೇನಲ್ಲ. ಅಮೆರಿಕ ದಶಕಗಳಿಂದ ಭಾರತದಲ್ಲಿ ಹಸ್ತಕ್ಷೇಪ ಮಾಡಲು ಇದು ಪ್ರಯತ್ನಿಸುತ್ತಿದೆ. ಆದರೆ ಈ ಪ್ರಯತ್ನಗಳು ಈಗ ಹೆಚ್ಚು ಆಕ್ರಮಣ ಕಾರಿಯಾಗಿದೆ. ಇದಕ್ಕೆ ಕಾರಣ ವಿದೇಶಿ ಒತ್ತಡಕ್ಕೆ ಮಣಿಯಲು ಸಿದ್ಧವಿಲ್ಲದ ಬಲವಾದ ಮತ್ತು ರಾಷ್ಟ್ರೀ ಯತಾವಾದಿ ನಾಯಕತ್ವವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಎನ್ನುತ್ತಾರೆ ವಿಶ್ಲೇಷಕರು.
ಭಾರತದ ಭದ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ, ಭಾರತದ ಸ್ವಾತಂತ್ರ್ಯದ ನಂತರದ ಈ ಹೊಸ ಯುಗವು ಕೆಲವು ವಿದೇಶಿ ಶಕ್ತಿಗಳನ್ನು ಆತಂಕಕ್ಕೆ ಒಳಪಡಿಸುತ್ತಿದೆ. ಅವರು ಭಾರತದ ವೇಗವಾಗಿ ಬೆಳೆಯುತ್ತಿರುವ ಶಕ್ತಿಯನ್ನು ನಿಗ್ರಹಿಸಲು ಪ್ರಯತ್ನಿಸಬಹುದು ಮತ್ತು ಪ್ರಧಾನ ಮಂತ್ರಿಯನ್ನು ಗುರಿಯಾಗಿಸಿಕೊಳ್ಳುವುದು ಕಾನೂನುಬಾಹಿರ ತಂತ್ರದ ಭಾಗವಾಗಬಹುದು. ಆದರೆ ಭಾರತವು ಎಲ್ಲಾ ಸಂದರ್ಭಗಳಲ್ಲೂ ತನ್ನ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

0 ಕಾಮೆಂಟ್‌ಗಳು