ಶಿರಿಬೀಡು, ಬನ್ನಂಜೆ: ಹಿಂದು ಸಂಗಮ ಹಾಗೂ ಬ್ರಹತ್ ಶೋಭಾ ಯಾತ್ರೆ​


ಉಡುಪಿ: ಹಿಂದು ಸಂಗಮ ಆಯೋಜನಾ ಸಮಿತಿ ಉಡುಪಿ ನಗರ, ಶಿರಿ ಬೀಡು ಮತ್ತು ಬನ್ನಂಜೆ ವಾರ್ಡ ವ್ಯಾಪ್ತಿಯಲ್ಲಿ ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರ  ಶಿರಿಬೀಡುನಲ್ಲಿ ನೆಡೆಯಿತು.    ಹಿಂದು ಸಂಗಮದ  ಅಂಗವಾಗಿ ಮಠದ ಬೆಟ್ಟುನಿಂದ ಆರಂಭ ಗೊಂಡು   ಶ್ರೀ ಶಂಕರ ನಾರಾಯಣ ದೇವಳದ ಎದುರು ಗಣ್ಯರು ಚಾಲನೆ ನೀಡಿದರು. ಶಾಸಕ ಯಶಪಾಲ್ ಸುವರ್ಣ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು  ಶುಭ ಹಾರೈಸಿದರು.

          
                                                                                                                                                       ಶೋಭಾ ಯಾತ್ರೆ ಗೆ ಮೆರಗು ನೀಡಿದ    ಭಾರತಮಾತೆ ,  ನಾಸಿಕ್ ಬ್ಯಾoಡ್ , ಕಲಶ ಹಿಡಿದು ಮಾತೆಯರು ,ಯಕ್ಷಗಾನ ಟ್ಯಾಬ್ಲೋ, ಮಹಿಳಾ ಚಂಡೆ, ಕುಣಿತಾ ಭಜನಾ ತಂಡಗಳು,ರಾಮ,ಲಕ್ಷ್ಮಣ,ಸೀತೆ, ಹನುಮಂತ ಟ್ಯಾಬ್ಲೋ, ಛತ್ರಪತಿ ಶಿವಾಜಿ, ಸಿಂಗಾರಿ ಮೇಳ ಚೆಂಡೆ ವಾದನದೊಂದಿಗೆ  ಮುಖ್ಯ ರಸ್ತೆಯಾದ  ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಎಸ್ ಪಿ ಕಚೇರಿ, ಬಾಲಭವನ ಮುಂದೆ  ಸಾಗಿ ಬಂದ ಶೋಭಾ ಯಾತ್ರೆ  ಪುಳಿ ಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರ  ಶಿರಿಬೀಡು ನಲ್ಲಿ  ಧಾರ್ಮಿಕ ಸಭೆ ಜರಗಿತು.



ಉದಯ ಕೊಡವೂರು ಮಾತನಾಡಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ನೇ  ಶತಮಾನೋತ್ಸವ ಆಚರಣೆ ಹಾಗೂ ವಂದೇ ಮಾತರಮ್  150 ವರ್ಷದ ಆಚರಣೆ ಸನಾತನ ಹಿಂದೂ  ಧರ್ಮದ ರಕ್ಷಣೆ  ನಮ್ಮೆಲ್ಲರ ಜವಾಬ್ಧಾರಿಯಾಗಿದ್ದು ,  ಹಿಂದೂ ಸಮಾಜ ಭಾಂದವರು ಒಟ್ಟಾಗಿ ಕೆಲಸ ಮಾಡೋಣ ಎಂದು ಶುಭ ಹಾರೈಸಿದರು.



ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಚಿಂತಕರಾದ  ಅಜೇಯ ಪಿ  ಶೆಟ್ಟಿ,  ಸುಜಿತ್ ಕೊಡವೂರು, ಡಾ  ಎಮ್ ಆರ್  ಪೈ, ವಿಜಯ ಕೊಡವೂರು,  ರವಿ  ಅಮೀನ್  , ವಿಠ್ಠಲ್ ಶೆಟ್ಟಿ  , ಭುಜಂಗ ಶೆಟ್ಟಿ  , ಗಣೇಶ್ ಗುರಿಕಾರ್, ಉದಯ ಮಠದ ಬೆಟ್ಟು , ಶ್ರೀಮತಿ ಸುಜಾತ, ಅಧ್ಯಕ್ಷತೆಯನ್ನು ಶಿರಿಬೀಡು ವಾರ್ಡಿನ ನಗರ ಸಭಾ ಸದಸ್ಯ  ಟಿ ಜಿ  ಹೆಗ್ಡೆ ವಹಿಸಿದ್ದರು, ಸಂಯೋಜಕ ರಾದ   ಬನ್ನಂಜೆ ವಾರ್ಡಿನ ಹರೀಶ್ ರಾಮ್, ಮಹೇಶ್ ಪೂಜಾರಿ, ಸಚಿನ್,  ಸುರೇಶ ಶೇರಿಗಾರ್,  ಸಂದೀಪ್ ಶೆಟ್ಟಿಗಾರ್ , ಆನಂದ ಸುವರ್ಣ , ಮನೀಶ್ ಶೆಟ್ಟಿ , ಅಕ್ಷಯ ಶೆಟ್ಟಿ , ಅಭಿಷೇಕ ಹಾಗೂ  ಸಮಿತಿಯ ಪದಾಧಿಕಾರಿಗಳು , ವಾರ್ಡಿನ ಸಮಿತಿಯ ಸದಸ್ಯರು ಉಪಸ್ಥರಿದ್ದರು. ಮೋಹನ್ ಶೆಟ್ಟಿ  ಸ್ವಾಗತಿಸಿದರು, ಸಂದೀಪ್ ವಂದಿಸಿದರು , ದೀಪಕ್ ನಿರೊಪಣೆಗೈದರು ಬನ್ನಂಜೆ ಮಾಸ್ಟರ್ ಡ್ರಾಮಾ ತಂಡದವರು ಮನೋರಂಜನಾ ಕಾರ್ಯಕ್ರಮ ಜರಗಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು