Header Ads Widget

ಉಡುಪಿ: ಪುತ್ತಿಗೆ ಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಂತಕೃಷ್ಣ ಪ್ರಸಾದ ಕುಸಿದು ಬಿದ್ದು ಮೃತ್ಯು

 


ಉಡುಪಿಯ ಪರ್ಯಾಯ ಪುತ್ತಿಗೆ ಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಅನಂತಕೃಷ್ಣ ಪ್ರಸಾದ (45) ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.



 ಸುಬ್ರಹ್ಮಣ್ಯ ಮೂಲದವರಾದ ಅನಂತಕೃಷ್ಣ ಪ್ರಸಾದ್ ಅವರು ಕೋಟಿ ಗೀತಾ ಲೇಖನಯಜ್ಞದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.



ನಿತ್ಯವೂ ಸಂಜೆ ಶ್ರೀಕೃಷ್ಣನ ದರ್ಶನ ಪಡೆದು ಅನಂತರ ರಥಬೀದಿಯಾಗಿ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದು ತೆರಳುತ್ತಿದ್ದರು. ಅ. 7ರಂದು ಸಂಜೆ ಎಂದಿನಂತೆ ರಾಯರ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. 


ತಕ್ಷಣ ರಾಘವೇಂದ್ರ ಮಠದ ಜಯತೀರ್ಥ ಆಚಾರ್ಯ ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು, ಅಂಬ್ಯುಲೆನ್ಸಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅನಂತಕೃಷ್ಣ ಅವರು ಮೃತಪಟ್ಟಿದ್ದಾರೆ. ಮೃತರು ತಂದೆ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು