ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಸಂಸ್ಥೆಗಳ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಶಾಲಾ ಸಂಚಾಲಕರಾದ ಶ್ರೀ. ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷರಾದ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ಉಪಾಧ್ಯಕ್ಷರಾದ ಶ್ರೀ ಶಶಿರಾಜ್ ಕುಂದರ್ ಕೋಶಾಧಿಕಾರಿ ಶ್ರೀಮತಿ ವೈಷ್ಣವಿ ಕಾಮತ್ ಉಪಸ್ಥಿತರಿದ್ದರು.
ಸತತ ಎಂಟು ವರ್ಷಗಳ ಅವಧಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿಯವರನ್ನು ಸನ್ಮಾನಿಸಲಾಯಿತು.
ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿನಾಯಕ್ ಕಿಣಿಯವರು ಮತ್ತು ಪ್ರಾಥಮಿಕ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಶ್ಮಾ ಶಾಲಾ ವರದಿಯನ್ನು ವಾಚಿಸಿದರು ಹಾಗೂ ಕೋಶಾಧಿಕಾರಿ ಶ್ರೀಮತಿ ವೈಷ್ಣವಿ ಕಾಮತ್ ೨೦೨೫-೨೬ರ ಲೆಕ್ಕ ಪತ್ರದ ವರದಿಯನ್ನು ವಾಚಿಸಿದರು.
ಸಭೆಯಲ್ಲಿ ರಕ್ಷಕ - ಶಿಕ್ಷಕ ಸಂಘದ ೨೦೨೬-೨೮ರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಶ್ರೀ ಶಶಿರಾಜ್ ಕುಂದರ್, ಉಪಾಧ್ಯಕ್ಷರಾಗಿ ಶ್ರೀ. ಸಂತೋಷ್ ಸಗ್ರಿ, ಕೋಶಾಧಿಕಾರಿಯಾಗಿ ಶ್ರೀಮತಿ ವೈಷ್ಣವಿ ಕಾಮತ್ ಆಯ್ಕೆಯಾದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವಿದ್ಯಾ ಅಮರ ಪೈ, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕವೃಂದ, ಹೆತ್ತವರು ಉಪಸ್ಥಿತರಿದ್ದರು.
ಸಹಶಿಕ್ಷಕಿಯರಾದ ಶ್ರೀಮತಿ ಚೈತ್ರ ವಿಜಯ್ ಸ್ವಾಗತಿಸಿ, ಶ್ರೀಮತಿ ದೀಪಾ ಶೆಟ್ಟಿ ನಿರೂಪಿಸಿ, ಶ್ರೀಮತಿ ದೀಪಿಕಾ ಭಟ್ ಶ್ರೀಮತಿ ಪ್ರತಿಭಾ ಎನ್ ಬಿ ಮತ್ತು ಶ್ರೀಮತಿ ಆಕ್ಷಯ ಭಟ್ ಪ್ರಾರ್ಥನೆಗೈದರು. ಶ್ರೀಮತಿ ಸುಷ್ಮಾಎಸ್.ಜಿ ವಂದಿಸಿದರು.

0 ಕಾಮೆಂಟ್‌ಗಳು