ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ, ದೀಪಾವಳಿಯ ಪ್ರಯುಕ್ತ ಆಕರ್ಷಕ ಬಣ್ಣ ಬಣ್ಣದ ಗೂಡುದೀಪ ಸ್ಪರ್ಧೆ, ದಿನಾಂಕ : 19-10-2025, ಭಾನುವಾರ, ಸಮಯ: ಮಧ್ಯಾಹ್ನ 2 ರಿಂದ 5, ಸ್ಥಳ : ಮಧ್ವಾಂಗಣ (ರಾಜಾಂಗಣ ಮಹಡಿ)
1. ಗೂಡುದೀಪ ತಯಾರಿಸಲು ಬೇಕಾದ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು.
2. ಸಾಂಪ್ರದಾಯಿಕ ಮತ್ತು ಆಧುನಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುವುದು.
3. ಸಾಂಪ್ರದಾಯಿಕ ಗೂಡುದೀಪವನ್ನು ಸ್ಠಳದಲ್ಲೇ ತಯಾರಿಸಬೇಕು.
4. ಆಧುನಿಕ ವಿಭಾಗದಲ್ಲಿ ಗೂಡುದೀಪದ ಅಂದ ಹೆಚ್ಚಿಸಲು ಮಠದ ಸಂಪ್ರದಾಯಕ್ಕೆ ತೊಂದರೆಯಾಗದ ಯಾವುದೇ ವಸ್ತುಗಳನ್ನು ಬಳಸಬಹುದು.
5. ಒಂದು ತಂಡದಲ್ಲಿ ಗರಿಷ್ಟ 2 ಮಂದಿಗೆ ಅವಕಾಶ.
6. ಗೂಡುದೀಪ ತಯಾರಿಸಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗುವುದು.
7. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು.
8. ಸಾಂಪ್ರದಾಯಿಕ ವಿಭಾಗಕ್ಕೆ ಪ್ರಥಮ ಬಹುಮಾನ ರೂಪಾಯಿ 5,000/- ,ದ್ವಿತೀಯ ಬಹುಮಾನ ರೂಪಾಯಿ 3,000/- ತೃತೀಯ ಬಹುಮಾನ ರೂಪಾಯಿ 2,000/-
9. ಆಧುನಿಕ ವಿಭಾಗಕ್ಕೆ ಪ್ರಥಮ ಬಹುಮಾನ ರೂಪಾಯಿ 8,000/- ,ದ್ವಿತೀಯ ಬಹುಮಾನ ರೂಪಾಯಿ 5,000/- ತೃತೀಯ ಬಹುಮಾನ ರೂಪಾಯಿ 3,000/-
10. ಭಾಗವಹಿಸಿದ ಪ್ರತೀ ತಂಡಕ್ಕೆಶ್ರೀ ಕೃಷ್ಣ ಪ್ರಸಾದದೊಂದಿಗೆ ಪ್ರೋತ್ಸಾಹಧನ ನೀಡಲಾಗುವುದು.
11. ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.
ಸ್ಪರ್ಧೆಗೆ ನೋಂದಾಯಿಸಲು ಸಂಪರ್ಕಿಸಿ. 1. ಕೇಶವ ಆಚಾರ್ 9632287917
2. ಕೆ. ರವೀಂದ್ರ ಆಚಾರ್9449390418
3. ಜಿ.ವಿ. ಆಚಾರ್7829100081
4. ರಾಘವೇಂದ್ರ ಭಟ್9448952964
0 ಕಾಮೆಂಟ್‌ಗಳು