Header Ads Widget

ಆದಿಉಡುಪಿ : ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ!

 

ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮಲ್ಪೆ ಭಾಗದ ಕಿ.ಮೀ. 85.200 ರಿಂದ 85.580 ರ ವರೆಗಿನ (ಆದಿ ಉಡುಪಿ ಭಾಗದ) ಚತುಷ್ಪಥದ ರಸ್ತೆಯ ಎರಡೂ ಬದಿಯಲ್ಲಿ ಏಕಕಾಲದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಯ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ) (2) & (5) ರನ್ವಯ ನವೆಂಬರ್ 10 ರಿಂದ 30 ರ ವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ- ಮಲ್ಪೆ ರಸ್ತೆಯ ಮಲ್ಪೆ ಭಾಗದ ಕಿ.ಮೀ. 85.200 ರಿಂದ 85.580 ರ ವರೆಗಿನ (ಆದಿ ಉಡುಪಿ ಭಾಗದ) ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ, ಸದ್ರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ

ಮಲ್ಪೆಯಿಂದ ಮಂಗಳೂರು ಮತ್ತು ಕುಂದಾಪುರ ಕಡೆಗೆ ಹೋಗಲು ಭಾರೀ ವಾಹನಗಳು ಮಲ್ಪೆ-ಬಲರಾಮ ಸರ್ಕಲ್-ತೊಟ್ಟಂ-ಗುಜ್ಜರಬೆಟ್ಟು-ಹೂಡೆ-ನೇಜಾರ್-ಕಲ್ಯಾಣಪುರ ಮಾರ್ಗವಾಗಿ ಸಂತೆಕಟ್ಟೆ ತಲುಪಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಬೇಕು.

ಮಲ್ಪೆಗೆ ಬರುವ ಭಾರಿ ವಾಹನಗಳು ಆಶೀರ್ವಾದ್ ಸರ್ಕಲ್-ಲಕ್ಷ್ಮೀನಗರ-ಕೊಡವೂರು ಮೂಲಕ ಮಲ್ಪೆ ಕಡೆಗೆ ಸಂಚರಿಸಬೇಕು. ಮಲ್ಪೆ ಕಡೆಗೆ ಹೋಗುವ ಮತ್ತು ಬರುವ ಲಘು ವಾಹನಗಳು ಕಲ್ಮಾಡಿ ಸರ್ಕಲ್‌ನಿಂದ ಅಂಬಲಪಾಡಿ ತಲುಪಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸಬೇಕು. ಕಲ್ಮಾಡಿಯಿಂದ-ಕಿದಿಯೂರು-ಕಡೇಕಾರು-ಕನ್ನರ್‌ಪಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಅಥವಾ ಉಡುಪಿ ಕಡೆಗೆ ಸಂಚರಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ಲಘು ವಾಹನಗಳು ಪಡುಕೆರೆ ತೊಟ್ಟಂ ಮುಖಾಂತರ ಬಲಾಯಿಪಾದೆಗೆ ಬಂದು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುವಂತೆ ಆದೇಶಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು