ಕಾಪು: ಇಮೇಜ್ ಮೊಬೈಲ್ಸ್–ಒಪ್ಪೊ ಎಕ್ಸ್‌ಕ್ಲೂಸಿವ್ ಶೋರೂಮ್ ಉದ್ಘಾಟನೆ

ಕಾಪು ಪೇಟೆಯ ಬಿಲ್ಲವರ ಸಹಾಯಕ ಸಂಘದ ಕಟ್ಟಡದಲ್ಲಿ ಇಮೇಜ್ ಮೊಬೈಲ್ಸ್–ಒಪ್ಪೊ ಎಕ್ಸ್‌ಕ್ಲೂಸಿವ್ ಶೋರೂಮ್‌ ಅನ್ನು ದಿನಾಂಕ 31-12-2025 ರಂದು ಬೆಳಿಗ್ಗೆ 10 ಗಂಟೆಗೆ ಭವ್ಯವಾಗಿ ಉದ್ಘಾಟಿಸಲಾಯಿತು. ಶೋರೂಮ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಶೋರೂಮ್‌ನ ರಿಬ್ಬನ್ ಕಟಿಂಗ್ ಕಾರ್ಯಕ್ರಮವನ್ನು ಕಾಪು ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಡಿಕೆರೆ ರತ್ನಾಕರ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ, ಕಾಪು ಟ್ರಸ್ಟಿಯಾದ ಶ್ರೀ ಪ್ರಸಾದ್ ಶೆಣೈ, ಮೊಗವೀರ ಸಮಾಜದ ಮುಖಂಡರಾದ ಶ್ರೀ ಮೋಹನ್ ಬಂಗೇರ, ಕಾಪು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಅಮಿನ್, ಪುರಸಭಾ ಸದಸ್ಯರಾದ ಶ್ರೀಮತಿ ಸರಿತ, ಶ್ರೀ ಉಮೇಶ್ ಕರ್ಕೇರ, ಉದ್ಯಮಿ ಶ್ರೀ ಶ್ರೀಕರ ಶೆಟ್ಟಿ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ಶ್ರೀ ವಿಕ್ರಂ ಕಾಪು, ಹಿತೈಷಿಗಳಾದ ಶ್ರೀ ಯಾದವ್ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇಮೇಜ್ ಮೊಬೈಲ್ಸ್–ಒಪ್ಪೊ ಎಕ್ಸ್‌ಕ್ಲೂಸಿವ್ ಶೋರೂಮ್‌ನಲ್ಲಿ ಗ್ರಾಹಕರಿಗೆ ಹೊಸ ತಂತ್ರಜ್ಞಾನ ಹೊಂದಿದ ಮೊಬೈಲ್‌ಗಳು, ಆಕರ್ಷಕ ಆಫರ್‌ಗಳು, ಸುಲಭದಾಯಕ ಇಎಂಐ ಗಳು ಹಾಗೂ ಉತ್ತಮ ಸೇವೆಗಳು ಲಭ್ಯವಿರಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ. ಕಾಪು ಹಾಗೂ ಸುತ್ತಮುತ್ತಲ ಪ್ರದೇಶದ ಗ್ರಾಹಕರಿಗೆ ಇದು ಮಹತ್ವದ ಸೌಲಭ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು