ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ ವಿಶ್ವವಿದ್ಯಾಲಯದ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಕಾಲೇಜಿನಲ್ಲಿ MSc Medical Biotechnology ನಂತರದ PhD ಯ ಪೂರ್ಣಾವಧಿ ಸಂಶೋಧನ ವಿದ್ಯಾರ್ಥಿ ಅಪೂರ್ವ ಜ್ಞಾನ, ಮೈಕ್ರೋಬಯಾಲಜಿ ಜೀನೋಮಿಕ್ಸ್ ಸಂಶೋಧನೆಗಾಗಿ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.
ಈ ಸಂಶೋಧನೆಯನ್ನು ಪಬ್ಲಿಕ್ ಹೆಲ್ತ್ ಜಿನೋಮಿಕ್ಸ್ (Public Health Genomics) ವಿಭಾಗದ ಮುಖ್ಯಸ್ಥರಾದ ಡಾ. ಟಿ. ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಎಸ್. ಡಿ. ಎಂ. ಧಾರವಾಡದ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ (ಮಾಜಿ MSLS ನಿರ್ದೇಶಕರು) ಅವರ ಸಹ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಉತ್ತೀರ್ಣರಾಗಿದ್ದಾರೆ.
ಇವರು ಬ್ರಹ್ಮಾವರ ಸಮೀಪದ ಹೇರೂರಿನ ರೋಟರಿ ಮಾಜಿ ಗವರ್ನರ್ ಜ್ಞಾನ ವಸಂತ ಶೆಟ್ಟಿ ಮತ್ತು ಅರುಂಧತಿ ವಿ ಶೆಟ್ಟಿ ಇವರ ಸುಪುತ್ರಿ.

0 ಕಾಮೆಂಟ್‌ಗಳು