Header Ads Widget

ಬಿಹಾರ ಓಪಿನಿಯನ್ ಪೋಲ್ : ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ 2 ಸಮೀಕ್ಷೆ ಪ್ರಕಟ - ಯಾರಿಗೆ ಮೇಲುಗೈ?

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮೊದಲ ಹಂತದ ಚುನಾವಣೆ ನವೆಂಬರ್ ಆರು ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ ಹನ್ನೊಂದಕ್ಕೆ ನಡೆಯಲಿದೆ.

ನವೆಂಬರ್ ಹದಿನಾಲ್ಕಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಎರಡನೇ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. ಇದುವರೆಗೆ, ಹಲವಾರು ಎಕ್ಸಿಟ್ ಪೋಲ್ ಗಳು ವೈಫಲ್ಯಗೊಂಡಿದ್ದರೂ, ಜನರಿಗೆ ಅದರ ಮೇಲಿನ ಕುತೂಹಲವಂತೂ ಕಮ್ಮಿಯಾಗಿಲ್ಲ. ಇದುವರೆಗೆ, ಹಲವಾರು ಸಮೀಕ್ಷೆಗಳು, ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟವಾಗಿವೆ. ಅದರ ಪ್ರಕಾರ, ಬಿಜೆಪಿ - ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ.


ಈಗ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಎರಡೆರಡು ಸಮೀಕ್ಷೆಗಳು ಪ್ರಕಟವಾಗಿವೆ. ನಂಬರ್ ನಲ್ಲಿ ಆಚೀಚೆ ಇರುವುದನ್ನು ಬಿಟ್ಟರೆ, ಎರಡೂ ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ.


ಮೊದಲ ಹಂತದಲ್ಲಿ 121 ಮತ್ತು ಎರಡನೇ ಹಂತದಲ್ಲಿ 122 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಜೆಡಿಯು ತಲಾ 101, ಚಿರಾಗ್ ಪಾಸ್ವಾನ್ ಅವರ ಪಾರ್ಟಿಯು 28 ಸ್ಥಾನದಲ್ಲಿ ಸ್ಪರ್ಧಿಸಿದೆ. ಇನ್ನು, ಮಹಾಘಟಬಂಧನ್ ನಲ್ಲಿ ಆರ್‌ಜೆಡಿ 143, ಕಾಂಗ್ರೆಸ್ 61 ಸ್ಥಾನದಲ್ಲಿ ಸ್ಪರ್ಧಿಸಿದೆ. ಎರಡು ಸಮೀಕ್ಷೆಗಳ ನಂಬರ್ಸ್ ಹೀಗಿದೆ :


ಬಿಹಾರ ಅಸೆಂಬ್ಲಿಯ ಒಟ್ಟು ಸ್ಥಾನಗಳು : 243

ಸರಳ ಬಹುಮತಕ್ಕೆ ಬೇಕಾದ ನಂಬರ್ : 122


Polstrat - ಪೀಪಲ್ಸ್ ಇನ್ ಸೈಟ್ ಸಮೀಕ್ಷೆ:


ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ - 133 ರಿಂದ 143ಸ್ಥಾನ

ಮಹಾಘಟಬಂಧನ್ ಮೈತ್ರಿಕೂಟ - 93 ರಿಂದ 102

ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಾರ್ಟಿ - 1 ರಿಂದ 3

ಓವೈಸಿಯ ಎಐಎಂಐಎಂ ಪಾರ್ಟಿ - 2 ರಿಂದ 3


ವೋಟ್ ಶೇರ್


ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ : ಶೇ. 45

ಮಹಾಘಟಬಂಧನ್ ಮೈತ್ರಿಕೂಟ : ಶೇ. 39

ಇತರರು : ಶೇ. 16


Polstrat - ಪೀಪಲ್ಸ್ ಇನ್ ಸೈಟ್ ಸಮೀಕ್ಷೆ: (ಯಾವ ಪಾರ್ಟಿಗೆ ಎಷ್ಟು?)


ಎನ್‌ಡಿಎ ಮೈತ್ರಿಕೂಟ

ಬಿಜೆಪಿ : 70 - 72

ಜೆಡಿಯು : 53 - 56

ಎಲ್‌ಜೆಪಿ : 10 -12

RLM : 0 - 1

HAM : 0 - 2


Polstrat - ಪೀಪಲ್ಸ್ ಇನ್ ಸೈಟ್ ಸಮೀಕ್ಷೆ: (ಯಾವ ಪಾರ್ಟಿಗೆ ಎಷ್ಟು?)


ಮಹಾಘಟಬಂಧನ್ ಮೈತ್ರಿಕೂಟ

ಆರ್‌ಜೆಡಿ : 69 - 72

ಕಾಂಗ್ರೆಸ್ : 10 - 13

ಎಡಪಕ್ಷಗಳು : 14 - 15

ಇತರರು : 4 -5


ಚಾಣಾಕ್ಯ ಸ್ಟ್ರಾಟಜೀಸ್ ಸಮೀಕ್ಷೆ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ : 128 ರಿಂದ 134 ಸ್ಥಾನ

ಮಹಾಘಟಬಂಧನ್ ಮೈತ್ರಿಕೂಟ : 102 ರಿಂದ 108

ಜನ್ ಸುರಾಜ್, ಎಐಎಂಐಎಂ ಮತ್ತು ಇತರರು : 5 - 10

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು