Header Ads Widget

ಮಣಿಪಾಲ : ಯುವಕರ ಗುಂಪು ಮಾರಾಮಾರಿ : ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು…!!

 

ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ವಿಡಿಯೋ ಆಧರಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಎರಡೂ ತಂಡದ ಯುವಕರು ಸಂಬಂಧಿಕರಾಗಿದ್ದು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾರ್ವಜನಿಕ ಕಿರಿಕಿರಿ ಮತ್ತು ಗಲಾಟೆ ಗಾಗಿ ನಾವು ಎರಡೂ ಗುಂಪುಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದೇವೆ. ವ್ಯಕ್ತಿಗಳ ಇತ್ಯಾದಿ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



ಆರೋಪಿತರುಗಳ ವಿರುದ್ದ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025 ಕಲಂ: 194(2) ಬಿ.ಎನ್‌.ಎಸ್‌ -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿತ ರುಗಳಾದ ಅಮರ್‌ ಶೆಟ್ಟಿ, ಚಂದನ್‌ ಸಿ ಸಾಲ್ಯಾನ್‌, ಧನುಷ್‌, ಅಜಯ್‌ ಇವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು