ಉಡುಪಿ: ರಥಬೀದಿ ಗೆಳೆಯರು ( ರಿ.) ಉಡುಪಿ, ಸಹಬಾಳ್ವೆ ಉಡುಪಿ, ಸೌಹಾರ್ದ ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಇವರ ಜಂಟಿ ಆಯೋಜನೆಯಲ್ಲಿ ತಾ.23.12.2025 ಮಂಗಳವಾರ ಸಂಜೆ ಗಂಟೆ 4.30 ಕ್ಕೆ ಉಡುಪಿ ಅಜ್ಜರಕಾಡು ವಿಮಾ ನೌಕರರ ಸಭಾ ಭವನದಲ್ಲಿ "ನಮ್ಮ ವರ್ತಮಾನ - ಭವಿಷ್ಯದ ಆತಂಕಗಳು"ವಿಚಾರಗೋಷ್ಠಿ ಮತ್ತು ಸಂವಾದ ಜರಗಲಿದೆ.
ಈ ವಿಚಾರಗೋಷ್ಠಿಯಲ್ಲಿ ಜನಪರ ಚಿಂತಕ ಶ್ರೀ ಕೆ. ಪಿ. ಸುರೇಶ್ ಕಂಜರ್ಪಣೆ ವಿಚಾರ ಮಂಡನೆ ಮಾಡಲಿರುವರು ನಂತರ ಸಂವಾದ ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮದ ಸಂಯೋಜಕ ರಥಬೀದಿ ಗೆಳೆಯರು ಸಂಸ್ಥೆಯ ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

0 ಕಾಮೆಂಟ್‌ಗಳು