ಉಡುಪಿ: ಕರ್ನಾಟಕ ಸರಕಾರ ನೀಡಿದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬಾ ಜಗಜೀವನ ರಾಂ ಪ್ರತಿಷ್ಠಿತ ಪ್ರಶಸ್ತಿ ಪಡೆದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರನ್ನು ಯೂನಿಯನ್ ಬ್ಯಾಂಕಿನ ನಿವೃತ್ತರ ಸಂಘದ ಉಡುಪಿ ಘಟಕ ಶನಿವಾರ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಉಡುಪಿಯ ಹಾಜೀ ಅಬ್ದುಲ್ಲಾ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಸಿಬಿಆರ್‌ಎ ಘಟಕದಿಂದ ನಡೆದ ಈ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಸಂಘದ ಅಧ್ಯಕ್ಷರಾದ ರಾಮಪ್ರಿಯ ಅವರು ವಹಿಸಿದ್ದರು.
ಉಡುಪಿ ಘಟಕದ ಕೆ.ವಾಸುದೇವ ಶೆಣೈ ಮಾತನಾಡಿ ಕರಾವಳಿಯ ಅಂಜುವ ಜನರಲ್ಲಿ ಘರ್ಜಿಸುವ ದೈರ್ಯ ತುಂಬಿದ ಜಯನ್ ಮಲ್ಪೆ ಶೋಷಿತರಲ್ಲಿ ಪ್ರಜ್ಙಾವಂತಿಕೆಯನ್ನು ಬೆಳೆಸಿದವರು. ದುಡಿಯುವ ಬಡಜನರಲ್ಲಿ ಹೋರಾಟದ ಜಾಗೃತಿ ಮೂಡಿಸಿ, ಪ್ರತಿನಿತ್ಯ ಕಷ್ಟ ಎಂದವರಿಗೆ ಆರ್ಥಿಕವಾಗಿ, ಸಮಾಜಿಕವಾಗಿ ಹತ್ತು ಹಲವು ಬಗೆಯ ಮಾರ್ಗದರ್ಶನ ಮಾಡುವ ಜಯನ್ ಮಲ್ಪೆ ದಲಿತರ ಪಾಲಿನ ರತ್ನ ಎಂದರು.
ಶ್ರೀಮತಿ ವಿಜಯಲಕ್ಷ್ಮೀ ಯವರು ಮಾತನಾಡಿ, ಕಳೆದ ನಾಲ್ಕು ದಶಕ್ಳಿಗಿಂತ ಹೆಚ್ಚು ಕಾಲ ಹೋರಾಟದ ಜೊತೆಗೆ ಬರಹಗಾರರಾಗಿ ಕಾರ್ಯನರ‍್ವಹಿಸಿ ಅವರ ಮೀನುಕ್ಷಾಮ ಕ್ಕೆಟ್ಟ ಕರಾವಳಿ ಲೇಖನಕ್ಕೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೊತೆಗೆ ಕಾರ್ಕಳ ಪತ್ರಕರ್ತರ ಸಂಘ ಜನಸಿರಿ ಪ್ರಶಸ್ತಿ ನೀಡಿ ಗೌರವಿಸಿರುವುದಲ್ಲದೆ, ರಾಜ್ಯ ಸರಕಾರ ಕನ್ನಡ ಕಾವಲು ಸಮಿತಿಯ ಸದಸ್ಯರನ್ನಾಗಿ ಕಳೆದ ಬಾರಿ ಆಯ್ಕೆ ಮಾಡಿತ್ತು ಎಂದ ಅವರು ಜಯನ್ ಮಲ್ಪೆಯವರ ಬದುಕು, ಬರಹ ಮತ್ತು ಹೋರಾಟವನ್ನು ವಿಶ್ಲೇಷಿಸಿದರು.
ವೇದಿಕೆಯಲ್ಲಿ ಯೂನಿಯನ್ ಬ್ಯಾಂಕಿನ ನಿವೃತ್ತರ ಸಂಘದ ನಾಗರಾಜ ಶೆಟ್ಟಿ, ಹಿರಿಯ ಮುಖಂಡ ಎಚ್.ಜಿ.ಪ್ರಭು ಉಪಸ್ಥತರಿದ್ದರು. ರಮಾಕಾಂತ ಸ್ವಾಗತಿಸಿ, ರಾಜೇಂದ್ರ ಕುಮಾರ್ ಮೈಸೂರು ಧನ್ಯವಾದ ನೀಡಿದರು.

0 ಕಾಮೆಂಟ್‌ಗಳು