ಇನ್‌ಸ್ಟಿಟ್ಯೂಟ್ ಆಫ್ ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ (INST), ಮೊಹಾಲಿಯಲ್ಲಿ ಪಿಎಚ್‌ಡಿ ಮಾಡುತ್ತಿರುವ ಕು. ಕೃತಿ ಕೆ. ರಾವ್ ಅವರು NBRCOM 2025 ನಲ್ಲಿ ನಡೆದ Health Science – Oral Presentation ವಿಭಾಗದ “ಯುವ ಸಂಶೋಧಕ ಪ್ರಶಸ್ತಿ” (Young Researcher Award)ಯಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಗಳಿಸಿದ್ದಾರೆ.
NBRCOM, ದೇಶದ ಪ್ರಮುಖ ಜೈವಿಕ ಮತ್ತು ಆರೋಗ್ಯ ವಿಜ್ಞಾನ ವೇದಿಕೆಗಳಲ್ಲೊಂದಾಗಿದ್ದು, ದೇಶದಾದ್ಯಂತದ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಂದ ಅತ್ಯುತ್ತಮ ಯುವ ವಿಜ್ಞಾನಿಗಳು ಸ್ಪರ್ಧೆಗೆ ಬರುತ್ತಾರೆ. ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಶ್ರೇಷ್ಠ ಸಂಶೋಧನೆಗಳಿಗೆ ರಾಷ್ಟ್ರಮಟ್ಟದ ಮಾನ್ಯತೆ ನೀಡುವ ಪ್ರತಿಷ್ಠಿತ ವೇದಿಕೆ ಎಂದೇ NBRCOM ಹೆಸರಾಗಿದೆ.
ಈ ಸ್ಪರ್ಧೆಯಲ್ಲಿ ಕೃತಿ ಅವರ ಸಂಶೋಧನೆ, e-Patram ಎಂಬ ಅತಿ ಕಡಿಮೆ ವೆಚ್ಚದ, ಪೇಪರ್-ಆಧಾರಿತ ಪಾಯಿಂಟ್-ಆಫ್-ಕೇರ್ (POCT) ಸೆನ್ಸರ್ ಕುರಿತಾಗಿತ್ತು. ಇದು ಮೂತ್ರದಲ್ಲಿನ ಡೊಪಮಿನ್ ಅನ್ನು ಸುಲಭವಾಗಿ ಪತ್ತೆಹಚ್ಚಿ, Parkinson’s Disease ಸೇರಿದಂತೆ ಹಲವು ನರ ಸಂಭಂದಿತ ಆರೋಗ್ಯ ಸ್ಥಿತಿಗಳಿಗೆ ಮುನ್ನೋಟ ನೀಡಲು ಸಹಕಾರಿಯಾಗಲಿದೆ.
ಪ್ರಸ್ತುತ catecholamine test ಮಾಡಿಸಲು ರೋಗಿಗಳು ಸುಮಾರು ₹5000 ಖರ್ಚು ಮಾಡಬೇಕಾಗುತ್ತದೆ. ಆದರೆ ಕೃತಿಯವರು ಅಭಿವೃದ್ಧಿಪಡಿಸಿರುವ e-Patram ಸೆನ್ಸರ್ ಒಂದು ಪರೀಕ್ಷೆಗೆ ಕೇವಲ ₹5 ವೆಚ್ಚದಲ್ಲಿ ಬಳಸಬಹುದಾದ ಅತ್ಯಂತ ಆರ್ಥಿಕ ಮತ್ತು ಸುಲಭವಾದ ಪರ್ಯಾಯವಾಗಲಿದೆ.
ಈ ಸಾಧನೆ ಆರೋಗ್ಯ ಸೇವೆಗಳಲ್ಲಿನ ವೆಚ್ಚಕಡಿತಕ್ಕೆ ಮಹತ್ವದ ದಾರಿ ತೆರೆದಿದ್ದು, NBRCOM ನಲ್ಲಿ ಪ್ರಶಸ್ತಿ ಪಡೆದಿರುವುದು ದೇಶದ ಶ್ರೇಷ್ಠ ವಿಜ್ಞಾನಿಗಳ ನಡುವೆ ಕೃತಿ ಅವರ ಸಂಶೋಧನೆಗೆ ಸಿಕ್ಕಿದ ಮಾನ್ಯತೆಯಾಗಿದೆ.
ಕು. ಕೃತಿ ಕೆ. ರಾವ್ ಅವರು ತೀರ್ಥಹಳ್ಳಿಯವರಾಗಿದ್ದು, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿಧ್ಯಾರ್ಥಿನಿ ಯಾಗಿರುತ್ತಾರೆ.

0 ಕಾಮೆಂಟ್‌ಗಳು